ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ವಾಕ್ ಅಂಡ್ ರನ್ ! ಎಸ್ ಪಿ ಮಿಥುನ್ ಕುಮಾರ್ ಬಾಗಿ !
ಶಿವಮೊಗ್ಗ : ಜಿಲ್ಲಾ ಪೊಲೀಸ್ ವತಿಯಿಂದ ಇಂದು ಶಿವಮೊಗ್ಗದಲ್ಲಿ ವಾಕ್ ಅಂಡ್ ರನ್ ಮುಖಾಂತರ ಜನಜಾಗೃತಿ ಅಭಿಯಾನವನ್ನ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪೊಲೀಸ್ ವತಿಯಿಂದ ಇಂದು ಮಾದಕ ವಸ್ತುಗಳ ಕುರಿತು ಜನಜಾಗೃತಿ ಅಭಿಯಾನದ ಹಿನ್ನೆಲೆಯಲ್ಲಿ ಈ ದಿನ Walk and Run (ನಡಿಗೆ ಮತ್ತು ಓಟ) ವನ್ನು ಹಮ್ಮಿಕೊಂಡಿದ್ದು,
ಶಿವಮೊಗ್ಗ ಡಿ ಎ ಆರ್ ಕವಾಯತು ಮೈದಾನದಿಂದ ಪ್ರಾರಂಭಿಸಿ, ಅಶೋಕ ವೃತ್ತ, ಎ ಎ ವೃತ್ತ, ಕರ್ನಾಟಕ ಸಂಘ, ಮಹಾವೀರ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಐ ಬಿ ವೃತ್ತದ ಮುಖಾಂತರ ಪುನಃ ಶಿವಮೊಗ್ಗ DAR ಕವಾಯತು ಮೈದಾನಕ್ಕೆ ಬಂದು ಮುಕ್ತಾಯ ಮಾಡಲಾಯಿತು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply