ಪ್ರತಿಭಟನಾ ನಿರತ ವಿಐಎಸ್ಎಲ್ ಕಾರ್ಮಿಕರಿಗೆ ಎಳ್ಳು ಬೆಲ್ಲ ಹಂಚಿದ ಸಂಸದ ಬಿ ವೈ ರಾಘವೇಂದ್ರ ಮತ್ತು ಶಾಸಕ ಚೆನ್ನಬಸಪ್ಪ
ಶಿವಮೊಗ್ಗ : ವಿ.ಐ.ಎಸ್.ಎಲ್ ಕಾರ್ಖಾನೆ ಉಳಿಸುವಂತೆ ಇಂದು ಕಾರ್ಮಿಕರು ವಿನೋಬನಗರದ ಸಂಸದ ಬಿ ವೈ ರಾಘವೇಂದ್ರರವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು, ಪ್ರತಿಭಟನಾ ನಿರತ ವಿಐಎಸ್ಎಲ್ ಕಾರ್ಮಿಕರಿಗೆ ಸಂಸದರು ಮಾತು ಶಾಸಕರು ಎಳ್ಳು ಬೆಲ್ಲ ಹಂಚಿದ್ದಾರೆ.
ದೆಹಲಿಗೆ ಹೋದಾಗಲೆಲ್ಲಾ ವಿಐಎಸ್ ಎಲ್ ಕಾರ್ಖಾನೆಯನ್ನ ಮುಂದು ವರೆಸಿಕೊಂಡು ಹೋಗುವಂತೆ ನಿರಂತರ ಪ್ರಯತ್ನದಲ್ಲಿ ನಾನಿದ್ದೇನೆ, ವಿಐಎಸ್ ಎಲ್ ಕಾರ್ಖಾನೆಯನ್ನ ಮುಚ್ಚುವುದನ್ನು ನಾನು ಬಿಡವುದಿಲ್ಲ.2022 ರಿಂದ ಕಾರ್ಖಾನೆ ಮುಚ್ಚದಂತೆ ದೆಹಲಿ ನಾಯಕರನ್ನ ಭೇಟಿಯಾಗಿ ನಿಮ್ಮ ಜೊತೆ ನಿಂತಿದ್ದೇನೆ ಎಂದು ಸಂಸದ ರಾಘವೇಂದ್ರ ಪ್ರತಿಭಟನಾಕಾರರಿಗೆ ತಿಳಿಸಿದ್ದಾರೆ.
ನಾಳೆ ಜ.16 ರಂದು ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಚಿವ ಪ್ರಹ್ಲಾದ್ ಜೋಷಿಯವರ ಜೊತೆ ಗೃಹ ಸಚಿವ ಅಮಿತ್ ಶಾ ರನ್ನ ನಾನು ಭೇಟಿಯಾಗುತ್ತಿದ್ದೇನೆ. ನಾಳೆ ನಡೆಯುವ ಸಭೆ ಮಹತ್ವದಾಗಿದೆ ಎಂದು ಹೇಳಿದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply