BREAKING NEWS : ಶಿವಪ್ಪನಾಯಕ ಸರ್ಕಲ್ ಬಳಿ ಪ್ರಿಯತಮೆಗೆ ಚಾಕು ಚುಚ್ಚಿದ ಪಾಗಲ್ ಪ್ರೇಮಿ !

BREAKING NEWS : ಶಿವಪ್ಪನಾಯಕ ಸರ್ಕಲ್ ಬಳಿ ಪ್ರಿಯತಮೆಗೆ ಚಾಕು ಚುಚ್ಚಿದ ಪಾಗಲ್ ಪ್ರೇಮಿ !

ಶಿವಮೊಗ್ಗ : ಕಳೆದ ಆರು ವರ್ಷಗಳಿಂದ ಪ್ರೀತಿ ಮಾಡುತ್ರಿದ್ದ ಹುಡುಗಿ ಬೇರೊಬ್ಬನನ್ನು ಮದುವೆ ಆಗುತ್ತಾಳೆಂಬ ನೋವಿಗಾಗಿ ತನ್ನ ಪ್ರೇಯಸಿಯನ್ನು ಜನನಿಬಿಡ ಪ್ರದೇಶಕ್ಕೆ ಕರೆದೊಯ್ದು ಚಾಕು ಚುಚ್ಚಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ತಾನು ಪ್ರೀತಿ ಮಾಡುತ್ತಿದ್ದ ಯುವತಿಯನ್ನು ಜನ ನಿಬಿಡ ಪ್ರದೇಶ ಕರೆದುಕೊಂಡು ಹೋಗಿದ್ದ ಪಾಗಲ್‌ ಪ್ರೇಮಿ ತಾವಿಬ್ಬರೂ ಏಕಾಂತದಲ್ಲಿರುವಾಗಲೇ ಜಗಳ ತೆಗೆದು ತನ್ನ ಪ್ರೇಯಸಿಯ ಹೊಟ್ಟೆಗೆ ಚಾಕು ಚುಚ್ಚಿದ್ದಾನೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಈ ದುರ್ಘಟನೆ ಶಿವಮೊಗ್ಗ ನಗರದ ಜನನಿಬಿಡ ಶಿವಪ್ಪ ನಾಯಕ ಸರ್ಕಲ್ ಬಳಿ ನಡೆದಿದೆ. ಪ್ರಿಯಕರನಿಂದ ಪ್ರಿಯತಮೆಗೆ ಚಾಕು ಇರಿತವಾಗಿದೆ. ಪ್ರೇಮಿಗಳು ಎನ್ನಲಾದ ಯುವಕ ಯುವತಿಯ ಮಧ್ಯದ ಜಗಳ ಶುರುವಾಗಿದೆ. ಈ ವೇಳೆ ಯುವಕ ಯುವತಿಗೆ ಚಾಕುನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ.

ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿಯ ಗ್ರಾಮದ ಈ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಯುವಕ ಚೇತನ್ ಶಿವಮೊಗ್ಗ ಆಟೋ ಕಾಂಪ್ಲೆಕ್ಸ್ ನಲ್ಲಿ ವರ್ಕ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದನು. ಯುವತಿಗೆ ಚಾಕುಯಿಂದ ಇರಿದು ಓಡಿ ಹೋಗುತ್ತಿದ್ದ ವೇಳೆ ಸಾರ್ವಜನಿಕರು ಚೇತನ್ ನನ್ನು ಹಿಡಿದಿದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಚಾಕು ಇರಿತದಿಂದ ಗಾಯಗೊಂಡ ಯುವತಿ ಅಂಬಿಕಾ ಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇನ್ನು ಸಾರ್ವಜನಿಕರಿಂದ ಒದೆ ತಿಂದ ಯುವಕ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರ ಮುಂದೆ ಹೇಳಿಕೆ ನೀಡಿದ ಯುವಕ:

ಕಳೆದ ಆರು ವರ್ಷಗಳಲ್ಲಿ ಚೇತನ್ ಮತ್ತು ಅಂಬಿಕಾ ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದೆವು. ಕಳೆದೊಂದು ವರ್ಷದಿಂದ ನಮ್ಮ ಮಧ್ಯೆ ಮನಸ್ತಾಪ ಇತ್ತು. ಇತ್ತೀಚಿಗೆ ಆಕೆಗೆ ಬೇರೆ ಕಡೆ ಮದುವೆ ಮಾಡಲು ಅವರ ಮನೆಯವರು ನಿರ್ಧಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ 3 ಚಾಕು ತೆಗೆದುಕೊಂಡು ಹೋಗಿದ್ದೆ. ಒಂದು ಚಾಕುವಿನಿಂದ ಇರಿದಾಗ ಮಿಸ್ ಆದರೆ ಮತ್ತೊಂದರಲ್ಲಿ ಇರಿಯುವುದು ನನ್ನ ಉದ್ದೇಶವಾಗಿತ್ತು. ನಂತರ ನಾನು ಮೂರನೇ ಚಾಕುವಿನಿಂದ ಇರಿದುಕೊಂಡು ಸಾಯಬೇಕು ಎಂದುಕೊಂಡಿದ್ದೆ ಎಂದು ಯುವಕನ ಹೇಳಿಕೆ ನೀಡಿದ್ದಾರೆ. ಈ ಘಟನೆ ಕುರಿತಂತೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.