ನಾಗರಿಕರೇ ಎಚ್ಚರ ಎಚ್ಚರ ಲಿಂಕ್ ಕ್ಲಿಕ್ ಮಾಡಿದರೆ ಖಾಲಿಯಾಗುತ್ತೆ ಅಕೌಂಟ್ ! ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ ಡಾಕ್ಟರ್ ಗೆ ಭಾರಿ ದೋಖ ! ಏನಿದು ಪ್ರಕರಣ ?
ಶಿವಮೊಗ್ಗ : ನಾಗರಿಕರಿಗೆ ಎಚ್ಚರ ಎಚ್ಚರ ಸಿಕ್ಕ ಸಿಕ್ಕ ಲಿಂಕ್ ಕ್ಲಿಕ್ ಮಾಡುವ ಮುನ್ನ ಇರಲಿ ಎಚ್ಚರ ! ಅಪರಿಚಿತ ಕಾಲ್ ಮತ್ತು ಮೆಸೇಜ್ ನಿಂದ ನಿಮಗೆ ಮೋಸವಾಗಬಹುದು. ಹೆಚ್ಚಾಗುತ್ತಿದೆ ಸೈಬರ್ ಕ್ರೈಂ ಪ್ರಕರಣಗಳು
ಶಿವಮೊಗ್ಗದ ವೈದ್ಯರೊಬ್ಬರು ತಮ್ಮ ಮನೆ ಬಾಡಿಗೆಗೆದ್ದು, ಮನೆ ಬಾಡಿಗೆಗೆ ಇದೆ ಎಂಬ ಜಾಹೀರಾತು ಒಂದನ್ನು ನೀಡಿದ್ದರು,ಅದರಲ್ಲಿ ನೀಡಿದ್ದ ನಂಬರ್ವೊಂದಕ್ಕೆ ಅಪರಿಚಿತ ನಂಬರ್ ನಿಂದ ಕರೆ ಬಂದಿದೆ. ಫೋನ್ ಮಾಡಿದ ಅಪರಿಚಿತ ತನ್ನನ್ನ ಮಿಲಿಟರಿ ಅಧಿಕಾರಿ ಎಂದು ಹೇಳಿದ್ದಾನೆ. ಅಲ್ಲದೆ ಶಿವಮೊಗ್ಗಕ್ಕೆ ವರ್ಗಾವಣೆ ಆಗಿದೆ ಎಂದಿದ್ದಾರೆ. ಶಿವಮೊಗ್ಗದಲ್ಲಿ ಅದ್ಯಾವ ಮಿಲಿಟರಿ ಬೆಟಾಲಿಯನ್ ಇದೆಯೋ ದೇವರೆ ಬಲ್ಲ. ಆದರೂ ಶಿವಮೊಗ್ಗಕ್ಕೆ ವರ್ಗಾವಣೆ ಎಂದ ಅಪರಿಚಿತ ಅಡ್ಸಾನ್ಸ್ ಹಣ ಕಳಿಸ್ತಿನಿ ಗೂಗಲ್ ಪೇ ಓಪನ್ ಮಾಡಿಟ್ಟುಕೊಳ್ಳಿ ಎಂದಿದ್ಧಾನೆ.
ಇರಬಹುದು ಎಂದು ಗೂಗಲ್ ಪೇ ಓಪನ್ ಮಾಡಿಟ್ಟುಕೊಂಡ ವೈದ್ಯರು ಆ ತಕ್ಷಣ ಅದಕ್ಕೊಂದು ಲಿಂಕ್ ಬಂದಿದೆ. ಅದರ ಮೇಲೆ ಕ್ಲಿಕ್ ಮಾಡಿದ ಬಳಿ ಹಿಂದೆ ಕರೆ ಮಾಡಿದ್ದವ ಮತ್ತೆ ಕಾಲ್ ಮಾಡಿ ನೀವೇ ಅಮೌಂಟ್ ನಮೂದು ಮಾಡಿ. ಇಲ್ಲಿ ಟ್ರಾನ್ಸಫರ್ ಲೇಟಾಗ್ತಿದೆ ಎಂದಿದ್ದಾನೆ. ಅದನ್ನು ನಂಬಿ ಕ್ಲಿಕ್ ಮಾಡಿದ ಲಿಂಕ್ನಲ್ಲಿ ಅಮೌಂಟ್ ನಮೂದಿಸಿದ್ದ ವೈದ್ಯರಿಗೆ ಅಂತಿಮವಾಗಿ ಅಕೌಂಟ್ನಲ್ಲಿ 95,999 ರೂಪಾಯಿ ಮೋಸವಾಗಿತ್ತು. ಸದ್ಯ ಈ ಸಂಬಂಧ ಸೈಬರ್ ಕ್ರೈಂ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply