ಹಣಗೆರೆಕಟ್ಟೆಯಲ್ಲಿ ಪ್ರತಿಭಟನೆ ! ಜಿಲ್ಲಾಧಿಕಾರಿ ಬರುವಂತೆ ಆಗ್ರಹ ! ಕಾರಣವೇನು ?
ಶಿವಮೊಗ್ಗ : ಭೂತರಾಯ ಚೌಡೇಶ್ವರಿ ದೇವಾಲಯ ಮತ್ತು ಹಜರತ್ ಸೈಯದ್ ಸಾದತ್ ದರ್ಗಾದ ಹುಂಡಿ ಹಣ ಎಣಿಕೆ ಮಾಡದಂತೆ ಗ್ರಾಮದ ಪಂಚಾಯಿತಿ ಅಧ್ಯಕ್ಷರು, ಕನ್ನಂಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯಲ್ಲಿ ಮಾಡಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯಲ್ಲಿರುವ ಭೂತರಾಯ ಚೌಡೇಶ್ವರಿ ದೇವಾಲಯ ಮತ್ತು ಹಜರತ್ ಸೈಯದ್ ಸಾದತ್ ದರ್ಗಾದ ಹುಂಡಿ ಹಣ ಎಣಿಕೆ ಮಾಡದಂತೆ ಗ್ರಾಮದ ಪಂಚಾಯಿತಿ ಅಧ್ಯಕ್ಷರು, ಕನ್ನಂಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಪ್ರತಿಭಟನೆ ಮಾಡಲಾಗುತ್ತಿದೆ. ದೇವಸ್ಥಾನದ ಬ್ಯಾಂಕ್ ಖಾತೆಯನ್ನು ಕನ್ನಂಗಿ ಗ್ರಾಮೀಣ ಬ್ಯಾಂಕ್ನಿಂದ ತೀರ್ಥಹಳ್ಳಿ ಬ್ಯಾಂಕ್ಗೆ ವರ್ಗಾವಣೆ ಮಾಡಲಾಗಿದೆ. ಅದನ್ನು ಪುನಃ ಕನ್ನಂಗಿ ಬ್ಯಾಂಕ್ಗೆ ವರ್ಗಾವಣೆ ಮಾಡಬೇಕು. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಮುಜರಾಯಿ ತಹಶೀಲ್ದಾರ್ ಪ್ರದೀಪ್, ತೀರ್ಥಹಳ್ಳಿ ಡಿವೈಎಸ್ಪಿ ಭೇಟಿ ನೀಡಿದ್ದು, ಹುಂಡಿ ಹಣ ಎಣಿಕೆಗೆ, ಸರಕಾರಿ ಕೆಲಸ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿ ಭೇಟಿ ನೀಡುವವರೆಗೆ ಹುಂಡಿ ಹಣ ಎಣಿಕೆ ಮಾಡದಂತೆ ಪ್ರತಿಭಟನಾಕಾರರು ಬಿಗಿ ಪಟ್ಟು ಹಿಡಿದಿದ್ದಾರೆ.
ದೇವಸ್ಥಾನ ಹಾಗೂ ದರ್ಗಾ ಅಕ್ಕಪಕ್ಕದಲ್ಲಿದ್ದು, ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿವೆ. ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಕಾರ್ಯ ಇಲ್ಲ. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಮತ್ತು ಬಸ್ ನಿಲ್ದಾಣ ಕೂಡ ಇಲ್ಲ ಎನ್ನಲಾಗುತ್ತಿದೆ.
ಭೂತರಾಯ ಮತ್ತು ಚೌಡಮ್ಮ ದೇವಿಯನ್ನು ದರ್ಗಾದಲ್ಲಿ ಸ್ಥಾಪಿಸಲಾಗಿದೆ. ಸುಮಾರು 400 ಹಿಂದೂಗಳು ಮತ್ತು 100 ಮುಸ್ಲಿಮರ ಮನೆಗಳನ್ನು ಹೊಂದಿರುವ ಹಣಗೆರೆ ಹಳ್ಳಿಯಲ್ಲಿ ಈವರೆಗೆ ಯಾವುದೇ ರೀತಿಯ ಕೋಮು ಗಲಭೆಗಳು ನಡೆದಿಲ್ಲ ಎಂಬುದು ವಿಶೇಷ. ಈ ಕ್ಷೇತ್ರ ಶಿವಮೊಗ್ಗದಿಂದ ಸುಮಾರು 38 ಕಿಮೀ ದೂರದಲ್ಲಿದೆ. ಹಿಂದೂ, ಮುಸ್ಲಿಂ ಎರಡೂ ಜನಾಂಗದ ಜನರು ಇಲ್ಲಿಗೆ ಬಂದು ಎರಡೂ ದೇವರಿಗೆ ನಮಸ್ಕರಿಸುತ್ತಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply