ರಾತ್ರಿ ಕೋಣೆಯಲ್ಲಿ ಮಲಗಲು ಹೋದವಳು ಬೆಳಗ್ಗೆ ಶವವಾಗಿ ಪತ್ತೆ ! ಮೃತದೇಹದ ಬಳಿ ಡೆತ್ ನೋಟ್ ಪತ್ತೆ !
ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಮೃತ ದೇಹ ಪತ್ತೆಯಾಗಿದೆ.
ಶರ್ಮಿತಾ ಬಿ.ಯು. ಮೃತಪಟ್ಟವರು. 2023 ಮಾರ್ಚ್ ನಲ್ಲಿ ಬಿಜ್ಜಳ ಗ್ರಾಮದ ಶರ್ಮಿತಾ, ದಾಸನಕೊಡುಗೆ ಗ್ರಾಮದ ಸಿದ್ದಾರ್ಥ್ ಪ್ರೀತಿಸಿ ಮದುವೆಯಾಗಿದ್ದರು.
ಪತಿ ಸೋಮೇಶ್ವರ ವನ್ಯಜೀವಿ ಅಭಯಾರಣ್ಯದಲ್ಲಿ ರಾತ್ರಿ ಪಾಳಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಅತ್ತೆ, ಮಾವ ಮಾತ್ರ ಮನೆಯಲ್ಲಿದ್ದರು. ರಾತ್ರಿ ಮಲಗಲು ಉಪ್ಪರಿಗೆ ಮೇಲಿನ ಕೊಠಡಿಗೆ ತೆರಳಿದ್ದ ಶರ್ಮಿತಾ ಬೆಳಿಗ್ಗೆ ಬಾಗಿಲು ತೆಗೆದಿಲ್ಲ. ಮನೆಯ ಕೆಲಸದವರು ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಶರ್ಮಿತಾ ಪೋಷಕರಿಗೆ ವಿಷಯ ತಿಳಿಸಲಾಗಿದ್ದು, ಪೋಷಕರು ಬಂದ ನಂತರ ಕೊಠಡಿಯ ಬಾಗಿಲು ಒಡೆದು ಒಳ ಹೋಗಿದ್ದಾರೆ. ಮೃತದೇಹದ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply