ಜನವರಿ 22ರಂದು ರಜೆ ಘೋಷಣೆ ಮಾಡಿ: ರಾಜ್ಯ ಸರ್ಕಾರಕ್ಕೆ ಈಶ್ವರಪ್ಪ ಒತ್ತಾಯ
ಶಿವಮೊಗ್ಗ : ರಾಮಭಕ್ತರಿಗೆ ಜ.22 ರಂದು ಸಂತೋಷದ ದಿನವಾಗಿದೆ.ಅಯೋಧ್ಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ವೇಳೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ರಾಜ್ಯದ ಜನರು ಮನೆಯಿಂದಲೇ ಕೂತು ನೋಡಲಿ. ಹಾಗಾಗಿ 22 ರಂದು ರಜೆ ಘೋಷಣೆ ಮಾಡಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸರ್ಕಾರವನ್ನು ಒತ್ತಾಯಿಸಿದರು.
ಇಂದುಸುದ್ದಿಗಾರರೊಂದಿಗೆಮಾತನಾಡಿದಅವರುಅಯೋಧ್ಯದಲ್ಲಿ ರಾಮಮಂದಿರ ಉದ್ಘಾಟನೆಯನ್ನ ಎಲ್ಲಾ ಟಿವಿಯಲ್ಲಿ ತೋರಿಸಲಾಗುತ್ತಿದೆ. ಹಾಗಾಗಿ ರಾಜ್ಯದ ಸಿಎಂರಿಗೆ ಜನ ಸಂತೋಷವಾಗಿ ರಾಮ ಮಂದಿರ ಸಂಭ್ರಮಾಚರಣೆಯನ್ನ ವೀಕ್ಷಿಸಲು ಮತ್ತು ಭಾಗಿಯಾಗಲು ರಜೆ ಘೋಷಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು.
ನಾಲ್ಕೈದು ದಿನ ನೀವು ಟೀಕೆ ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಅನಂತ್ ಕುಮಾರ್ ಹೆಗಡೆಯವರಿಗೆ ಪ್ರಾರ್ಥನೆ ಮಾಡುತ್ತೇನೆ. ಅನಂತ್ ಕುಮಾರ್ ಹೆಗಡೆ ಒಬ್ಬ ದೇಶ ಭಕ್ತ, ದೈವ ಭಕ್ತ. ಆದರೆ ನಾಲ್ಕೈದು ದಿನ ಟೀಕೆ ಮಾಡುವುದು ಬೇಡ ಎಂದು ಅವರಿಗೂ ಪ್ರಾರ್ಥನೆ ಮಾಡುತ್ತೇನೆ ಎಂದರು.
ಸಿಎಂ ಸಿದ್ದರಾಮಯ್ಯ ರಾಮ ಮಂದಿರ ಹೋಗುವ ವಿಚಾರಕ್ಕೆ ಮಾತನಾಡಿ, ಸಿದ್ದರಾಮಯ್ಯ ಈಗ ಯೂ ಟರ್ನ್ ಹೊಡೆಯುತ್ತಿದ್ದಾರೆ. ಹೋಗುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply