ಸಮಾನತೆಯನ್ನು ತಂದುಕೊಟ್ಟ ಮಹಾನ್ ಚೇತನ ಬಸವಣ್ಣ – ಬೆಕ್ಕಿನ ಕಲ್ಮಠದ ಮುರುಘ ರಾಜೇಂದ್ರ ಸ್ವಾಮೀಜಿ

ಸಮಾನತೆಯನ್ನು ತಂದುಕೊಟ್ಟ ಮಹಾನ್ ಚೇತನ ಬಸವಣ್ಣ – ಬೆಕ್ಕಿನ ಕಲ್ಮಠದ ಮುರುಘ ರಾಜೇಂದ್ರ ಸ್ವಾಮೀಜಿ

ಶಿವಮೊಗ್ಗ : ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಮಹಿಳೆಯರಲ್ಲಿ ಸಮಾನತೆಯನ್ನು ತಂದುಕೊಟ್ಟ ಮಹಾನ್ ಚೇತನ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಸರ್ಕಾರ ಘೋಷಿಸಿದ್ದು ಹೆಮ್ಮೆಯ ಸಂಗತಿ ಎಂದು ಬೆಕ್ಕಿನ ಕಲ್ಮಠದ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಸವಣ್ಣ ಅವರಿಗೆ ಸಾಂಸ್ಕೃತಿಕ ಸ್ಥಾನಮಾನ ನೀಡುವ ಪ್ರಸ್ತಾವನೆಗೆ ಒಪ್ಪಿ. ಕ್ರಾಂತಿಯೋಗಿ ಬಸವಣ್ಣ ರಾಜ್ಯದ ‘ಸಾಂಸ್ಕೃತಿಕ ನಾಯಕ’ ಎಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಘೋಷಿಸಿದ ಹಿನ್ನೆಲೆ ಗುರುವಾರ ನಗರದ ಗಾಂಧಿ ಪಾರ್ಕ್ ಮುಂಭಾಗ ಇರುವ ವಿಶ್ವಗುರು ಬಸವಣ್ಣನವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಸರ್ಕಾರ ನೆನ್ನೆಯ ಸಚಿವ ಸಂಪುಟ ಸಭೆಯಲ್ಲಿ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿರುವುದು ನಮಗೆಲ್ಲ ಅತೀವ ಸಂತೋಷವನ್ನು ತಂದಿದೆ. ವ್ಯಕ್ತಿಯ ವಿಕಸನದಲ್ಲಿ ಸಂಸ್ಕೃತಿ ಮುಖ್ಯ ಪಾತ್ರ ವಹಿಸುತ್ತದೆ. ಅದೇ ರೀತಿ ದೇಶದ ಉಳಿವಿಗೂ ಸಂಸ್ಕೃತಿಯೇ ಮೂಲ ಕಾರಣ. ಸಂಸ್ಕೃತಿ ಇಲ್ಲದ ವ್ಯಕ್ತಿ ಹಾಗೂ ದೇಶ ಬೇಗ ನಶಿಸಿ ಹೋಗುತ್ತದೆ. ಇದು ಆಗಕೂಡದು ಎನ್ನುವ ಉದ್ದೇಶದಿಂದ 12 ಶತಮಾನದಲ್ಲಿಯೇ ಬಸವಣ್ಣನವರು ತಮ್ಮ ತತ್ವ ಸಿದ್ಧಾಂತದ ಮೂಲಕ ಅಡಿಪಾಯ ಹಾಕಿ ಕೊಟ್ಟವರು ಎಂದು ಹೇಳಿದರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ.ಮಾತನಾಡಿ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಏಕೆಂದರೆ, ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಸಾಹಿತ್ಯ, ಧರ್ಮ,ಆಧ್ಯಾತ್ಮ, ಸಾಮಾಜಿಕವಾಗಿರುವಂತಹ ಎಲ್ಲಾ ಮೌಲ್ಯಗಳಲ್ಲಿ ಬಸವಣ್ಣನವರ ಪ್ರಭಾವ ಇರುವುದನ್ನು ನಾವು ಕಾಣಬಹುದು. ಹಾಗಾಗಿ ಎಲ್ಲಾ ಮೌಲ್ಯಗಳ ಹಿನ್ನೆಲೆಯಲ್ಲಿ ಬಸವಣ್ಣನವರ ದಟ್ಟವಾದ ಪ್ರಭಾವ ಇರುವುದನ್ನು ಮನಗಂಡು ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ ಮತ್ತು ಇದನ್ನು ಅಧಿಕೃತವಾಗಿ ಘೋಷಣೆ ಮಾಡಿರುವುದು ನಮಗೆ ಸಂತೋಷವನ್ನು ಉಂಟು ಮಾಡಿದೆ. ಬಸವಣ್ಣನವರು ಹುಟ್ಟಿದ ನೆಲದಲ್ಲಿ ಅವರನ್ನ ಸಾಂಸ್ಕೃತಿಕ ನಾಯಕರಾಗಿ ಒಪ್ಪಿಕೊಂಡರೆ ಉಳಿದವರು ಕೂಡ ಅದನ್ನು ಪಾಲಿಸುತ್ತಾರೆ. ಬಸವ ಅಭಿಮಾನಿಗಳು ಬಸವಣ್ಣನವರ ಹೆಸರನ್ನ ಹೇಳುವುದು, ಬಸವಣ್ಣನವರ ವಚನಗಳನ್ನು ಪ್ರವಚನಗಳನ್ನು ಭಾಷಣಗಳನ್ನು ಮಾಡುವುದು ಅಷ್ಟೇ ಅಲ್ಲ ಬಸವಣ್ಣನವರ ಮೌಲ್ಯಗಳ ಸಂಗತಿಯನ್ನು ಅರ್ಥ ಮಾಡಿಕೊಂಡು, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಿಯಾಶೀಲವಾದರೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಹೆಚ್ಚಿನ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್ ರುದ್ರೇ ಗೌಡ, ಡಾ. ಸರ್ಜಿ ಫೌಂಡೇಶನ್ ವ್ಯವಸ್ಥಾಪಕರಾದ ಡಾ. ಧನಂಜಯ್ ಸರ್ಜಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಹೆಚ್ ಸಿ ಯೋಗೇಶ್, ಎಸ್ ಪಿ ದಿನೇಶ್, ವಿಜಯ್ ಕುಮಾರ್ ರೋಟರಿ, ವಿಶ್ವಾಸ್ ಇ, ಹಲವರು ಉಪಸ್ಥಿತರಿದ್ದರು.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.