ಶಿವಮೊಗ್ಗ: ಫೇಸ್‌ಬುಕ್ ನಲ್ಲಿ ಸುಲಭ ಸಾಲದ ಜಾಹೀರಾತು ನೋಡಿ ಕರೆ ಮಾಡಿದಾತನಿಗೆ 36,500 ರೂ. ಪಂಗನಾಮ!

ಶಿವಮೊಗ್ಗ: ಫೇಸ್‌ಬುಕ್ ನಲ್ಲಿ ಸುಲಭ ಸಾಲದ ಜಾಹೀರಾತು ನೋಡಿ ಕರೆ ಮಾಡಿದಾತನಿಗೆ 36,500 ರೂ. ಪಂಗನಾಮ!

ಶಿವಮೊಗ್ಗ : ಎರಡು ಲಕ್ಷ ರೂ.ವರೆಗೆ ಸುಲಭವಾಗಿ ಸಾಲ ದೊರೆಯಲಿದೆ ಎಂದು ಫೇಸ್‌ ಬುಕ್‌ನಲ್ಲಿದ್ದ ಜಾಹೀರಾತು ನಂಬಿ ಕರೆ ಮಾಡಿದ್ದ ಭದ್ರಾವತಿ ಯುವಕನಿಗೆ 36,500 ರೂ. ವಂಚನೆ ಮಾಡಿರುವ ಘಟನೆ ನಡೆದಿದೆ.

ಜಾಹೀರಾತಿನಲ್ಲಿದ್ದ ಮೊಬೈಲ್ ನಂಬರ್‌ಗೆ ಭದ್ರಾವತಿಯ ಯುವಕ ಕರೆ ಮಾಡಿದ್ದ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

 

ಕರೆ ಸ್ವೀಕರಿಸಿ ಮಾತನಾಡಿದ ವ್ಯಕ್ತಿ, ತಾವು ಮಂಗಳೂರಿನ ಫೈನಾನ್ಸ್ ಸಂಸ್ಥೆ ಎಂದು ಪರಿಚಯಿಸಿಕೊಂಡಿದ್ದ. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪ್ಯಾನ್ ಕಾರ್ಡ್ ವಿವರ ಕೊಡುವಂತೆ ತಿಳಿಸಿದ್ದ. ದಾಖಲೆಗಳನ್ನು ಕಳುಹಿಸುತ್ತಿದ್ದಂತೆ ಸಾಲ ಮಂಜೂರಾತಿ ಆಗಿದೆ. ಇದರ ಪ್ರೋಸೆಸ್ ಫೀಜ್, ಟ್ಯಾಕ್ಸ್ ಸೇರಿದಂತೆ ನಾನಾ ಕಾರಣಕ್ಕೆ 36,500 ರೂ. ಪಾವತಿಸಬೇಕು ಎಂದು ತಿಳಿಸಿದ್ದ.

ಇದನ್ನು ನಂಬಿದ ಭದ್ರಾವತಿಯ ಯುವಕ 36,500 ರೂ. ಪಾವತಿಸಿದ್ದ. ಆದರೂ ಸಾಲದ ಹಣ ಬಾರದಿದ್ದಾಗ ವಂಚನೆಗೊಳಗಾಗಿದ್ದು ಅರಿವಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Leave a Reply

Your email address will not be published.