ಕುವೆಂಪು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ ಮತ್ತು ಡಾ. ಸೂರಜ್ ರೇವಣ್ಣ ನಾಮನಿರ್ದೆಶನ
ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ವಿಧಾನ ಪರಿಷತ್ತಿನ ಇಬ್ಬರು ಶಾಸಕರನ್ನು ನೇಮಿಸಲಾಗಿದೆ. ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ಮತ್ತು ಸೂರಜ್ ರೇವಣ್ಣ ಅವರನ್ನು ನೇಮಿಸಿ ಸಭಾಪತಿ ಅವರು ನಾಮ ನಿರ್ದೇಶನ ಮಾಡಿದ್ದಾರೆ.
ಈ ಸಂಬಂಧ ವಿಧಾನ ಪರಿಷತ್ತಿನ ಕಾರ್ಯದರ್ಶಿ ಅವರು ಕುವೆಂಪು ವಿವಿ ಕುಲ ಸಚಿವರಿಗೆ ಆದೇಶ ಪ್ರತಿ ರವಾನಿಸಿದ್ದಾರೆ.
ವಿಶ್ವವಿದ್ಯಾಲಯಗಳ ಶೈಕ್ಷಣಿಕ ಚುಟುವಟಿಕೆ ಕುರಿತು ಶಾಸನಗಳು, ಆದೇಶಗಳು, ನಿಯಮಗಳನ್ನು ರಚಿಸಲು ವಿದ್ಯಾವಿಷಯಕ ಪರಿಷತ್ತಿಗೆ ರಾಜ್ಯ ವಿಧಾನ ಪರಿಷತ್ ವತಿಯಿಂದ ಕುವೆಂಪು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ ಮತ್ತು ಸೂರಜ್ ರೇವಣ್ಣ ಅವರನ್ನು ಇಂದು ನಾಮನಿರ್ದೆಶನ ಮಾಡಿ ಆದೇಶ ಹೊರಡಿಸಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply