ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಗಣರಾಜ್ಯೋತ್ಸವ ಆಚರಣೆ
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ರವರು ದ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಎಲ್ಲರಿಗೂ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳನ್ನು ಕೋರಿ ಮಾತನಾಡುತ್ತಾ ವಿಕಸಿತ ಭಾರತ ಮುನ್ನಡೆಯುತ್ತಿದ್ದು, ಬರೀ ಸರ್ಕಾರವನ್ನು ಪ್ರತಿಯೊಬ್ಬ ಭಾರತೀಯನೂ ಇದಕ್ಕೆ ಕೊಡುಗೆ ನೀಡುವುದರ ಮೂಲಕ ಸಹಕಾರ ನೀಡಿ ಯಶಸ್ವಿ ಭಾರತದತ್ತ ಮುನ್ನೆಡೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನುಡಿದು ಯುವ ವಿದ್ಯಾರ್ಥಿಗಳಿಗಾಗಿ ಸಂಘದಿAದ ಅಡ್ವಾನ್ಸ್ ಸ್ಕಿಲ್ ಡೆವೆಲಪ್ಮೆಂಟ್ ಕೇಂದ್ರ ಪ್ರಾರಂಭಿಸಿದ್ದು ಅದರ ಉಪಯೋಗ ಪಡೆದು ವಿಕಸಿತ ಭಾರತದ ನಿರ್ಮಾಣಕ್ಕೆ ಸಹಕರಿಸಲು ಕೋರಿದರು.
ನಿಕಟಪೂರ್ವ ಅಧ್ಯಕ್ಷರಾದ ಜೆ.ಆರ್ ವಾಸುದೇವ, ಮಾಜಿ ಅಧ್ಯಕ್ಷರಾದ ಕೆ. ವಿ. ವಸಂತ್ ಕುಮಾರ್, ಟಿ.ಆರ್ ಅಶ್ವಥ್ನಾರಾಯಣ ಶೆಟ್ಟಿ, ಡಿ.ಎಂ. ಶಂಕರಪ್ಪ ಮಾತನಾಡಿ ನ್ಯಾಯ, ಸ್ವಾತಂತ್ರö್ಯ, ಸಮಾನತೆ ಮತ್ತು ಭಾತೃತ್ವದ ನಮ್ಮನ್ನು ಪ್ರಗತಿ ಮತ್ತು ಏಕತೆಯ ಹಾದಿಯಲ್ಲಿ ಮುನ್ನಡೆಸಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ-ಕಾರ್ಯದರ್ಶಿ ಜಿ. ವಿಜಯಕುಮಾರ್, ಖಜಾಂಚಿ ಎಂ. ರಾಜು, ನಿರ್ದೇಶಕರುಗಳಾದ ಎಸ್.ಎಸ್. ಉದಯಕುಮಾರ್, ಕೆ.ಎಸ್. ಸುಕುಮಾರ್, ಮಧುಸೂಧನ ಐತಾಳ್, ಪರಮೇಶ್ವರ ಈ, ಪ್ರದೀಪ್ ವಿ. ಯಲಿ, ಮಂಜೇಗೌಡ, ಗಣೇಶ ಎಂ. ಅಂಗಡಿ, ಮರಿಸ್ವಾಮಿ, ರಮೇಶ್ ಹೆಗಡೆ, ಡಿ.ಎನ್. ನಟರಾಜ್, ಪ್ರಶಾಂತ್ ಶಾಸ್ತಿç, ಮೊದಲಾದವರು ಉಪಸ್ಥಿತರಿದ್ದರು.
Leave a Reply