ಒಂದೇ ತರಹದ ಎರಡು ಬೈಕ್ ಅದಲು ಬದಲು ! ಶಾಕ್ ಆದ ಮಾಲೀಕರು ! ಹೀಗೂ ಆಗುತ್ತೆ ಎಚ್ಚರ !

ಒಂದೇ ತರಹದ ಎರಡು ಬೈಕ್ ಅದಲು ಬದಲು ! ಶಾಕ್ ಆದ ಮಾಲೀಕರು ! ಹೀಗೂ ಆಗುತ್ತೆ ಎಚ್ಚರ !

ಶಿವಮೊಗ್ಗ : ಒಂದೇ ತರಹದ ಬೈಕ್ ಅದಲು ಬದಲು ಆಗಿರುವ ಅಚ್ಚರಿಯ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಹೌದು ಒಂದೇ ರೀತಿಯ Rtr Apache ಎರಡು ಬೈಕ್ ಅದುಲು ಬದಲು ಆಗಿರುವ ಅಪರೂಪದ ಘಟನೆ ಕೇಳುವರಲ್ಲಿ ಅಚ್ಚರಿ ಮೂಡಿಸಿದೆ. ಹೀಗೂ ಆಗುತ್ತಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ಏನಿದು ಘಟನೆ ಅಂತೀರಾ ?

ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಿನಾಂಕ 24.01.2024ರಂದು ಈ ಘಟನೆ ನಡೆದಿದ್ದು. ವ್ಯಕ್ತಿಯೋಬ್ಬರು ವಿನೋಬನಗರ ಪೊಲೀಸ್ ಠಾಣೆಗೆ ಕರೆ ಮಾಡಿ ‘ ಸರ್ ನನ್ನ ಬೈಕ್ ಅದಲು ಬದಲಾಗಿದೆ ‘ ಬೈಕ್ ಚಾಲಕರು ತಮ್ಮ ಗಮನಕ್ಕೆ ಬಾರದೆ ಅದುಲು ಬದಲು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ಹೇಳಿದ್ದಾರೆ.ಸಂಬಂಧ ಪೊಲೀಸರಿಗೆ ದೂರು ಸಹ ಬಂದಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಪಡೆದುಕೊಂಡ ಪೊಲೀಸರು ಮೊದಲು ಬೈಕ್ ಮಾಲೀಕನ ದಾಖಲೆಗಳನ್ನು ಪಡೆದು ಖಾತರಿಪಡಿಸಿಕೊಂಡಿದ್ದಾರೆ, ನಂತರ MCCTNS APP ನ ಮುಖಾಂತರ ಬೈಕ್ ಬದಲಾಗಿದ್ದ ಮಾಲೀಕನ ನಂಬರ್ ಪತ್ತೆ ಹಚ್ಚಿದ್ದಾರೆ.

ಆ ಬಳಿಕ ವ್ಯಕ್ತಿಗೆ ಕರೆ ಮಾಡಿ ಸ್ಥಳಕ್ಕೆ ಬರಲು ಸೂಚಿಸಿದ್ದಾರೆ.ಇಬ್ಬರು ಬೈಕ್​ ಮಾಲೀಕರನ್ನ ವಿಚಾರಿಸಿದ ಪೊಲೀಸರು ಬೈಕ್​ ದಾಖಲೆಗಳನ್ನ ಪರಿಶೀಲನೆ ಮಾಡಿದ್ದಾರೆ. ಆನಂತರ ಅವರವರ ಬೈಕ್​ನ್ನ ಅವರವರಿಗೆ ಕೊಟ್ಟಿದ್ದಾರೆ.

ಪೊಲೀಸರು ಸಮಸ್ಯೆಯನ್ನು ತಮ್ಮ ತಾಂತ್ರಿಕತೆಯ ಸಹಾಯ ಪಡೆದು ಸ್ಥಳದಲ್ಲಿಯೇ ಬಗೆಹರಿಸಿ ವ್ಯಕ್ತಿಗಳ ಮಾಹಿತಿಯನ್ನ ಪಡೆದುಕೊಂಡು ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ. 

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.