ಡಿವೈಎಸ್ಪಿ ಬಾಲರಾಜ್ ಜಾಗಕ್ಕೆ ಡಿವೈಎಸ್ಪಿ ಜೆ ಜೆ ತಿರುಮಲೇಶ್ ವರ್ಗಾವಣೆ ! ಶಿವಮೊಗ್ಗ ರೌಡಿಸಂ ಜಗತ್ತಿಗೆ ಸಿಂಹ ಸ್ವಪ್ನ ವಾಗಿದ್ದ ! ಕ್ರೈಂ ಲೋಕದ ಹಲವು ಕೇಸ್ ಗಳನ್ನೂ ತಮ್ಮ ಚಾಣಾಕ್ಷತನದಿಂದ ಭೇದಿಸಿದ ಇವರ ಬಗ್ಗೆ ತಿಳಿದುಕೊಳ್ಳಲೇಬೇಕು
ಶಿವಮೊಗ್ಗ : ಬಿಟ್ ಕಾಯಿನ್ ತನಿಖೆಯ ತನಿಖಾಧಿಕಾರಿ ಡಿ ವೈ ಎಸ್ ಪಿ ಬಾಲರಾಜ್ ಇತ್ತೀಚಿಗಷ್ಟೇ ಶಿವಮೊಗ್ಗದಿಂದ ಬೆಂಗಳೂರಿನ ಎಸ್ ಐ ಟಿ ಗೆ ವರ್ಗಾವಣೆಯಾಗಿದ್ದರು . ನಂತರ ಖಾಲಿಯಾಗಿದ್ದ ಜಾಗಕ್ಕೆ ಸರ್ಕಾರ ಯಾರನ್ನು ನೇಮಿಸಿರಲಿಲ್ಲ . ಈಗ ಸದ್ಯ ಇವರಿಂದ ಖಾಲಿಯಾಗಿರುವ ಜಾಗಕ್ಕೆ ಲೋಕಾಯುಕ್ತದಲ್ಲಿ ಡಿವೈಎಸ್ಪಿಯಾಗಿರುವ ಜೆ.ಜೆ.ತಿರುಮಲೇಶ್ ರವರು ಆಗಮಿಸಿದ್ದಾರೆ.
ಡಿವೈಎಸ್ಪಿ ತಿರುಮಲೇಶ್ ಶಿವಮೊಗ್ಗಕ್ಕೆ ಹೊಸಬರಲ್ಲ. ಭದ್ರಾವತಿಯಲ್ಲಿ ಸಿಪಿಐ ಆಗಿ 3 ವರ್ಷ ಸೇವೆ ಮಾಡಿದ ಅನುಭವವಿದೆ.ಶಿವಮೊಗ್ಗ ರೌಡಿಸಂ ಜಗತ್ತಿನ ಹಲವು ಆಪರೇಷನ್ಗಳಲ್ಲಿ ಪಾಲ್ಗೊಂಡಿದ್ದರು. ಕ್ರೈಂ ಲೋಕದ ಪಾಪಿಗಳ ಪಾಲಿಗೆ ಸಿಂಹ ಸ್ವಪ್ನ ವಾಗಿದ್ದರು ಡಿ ವೈ ಎಸ್ ಪಿ ಜೆ ಜೆ ತಿರುಮಲೇಶ್ . ಶಿವಮೊಗ್ಗದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ರವಿ ಡಿ ಚನ್ನಣ್ಣನವರ್ ಮತ್ತು ಅಭಿನವ್ ಖರೆ ಅವರ ಜೊತೆ ಸಾಕಷ್ಟು ನಿಗೂಢ ಕೇಸ್ ಗಳಲ್ಲಿ ಜೆ ಜೆ ತಿರುಮಲೇಶ್ ತನಿಖೆಯ ಭಾಗವಾಗಿ ಕೆಲಸ ಮಾಡಿದವರು.
ಅಷ್ಟೇ ಅಲ್ಲದೆ ಶಿವಮೊಗ್ಗ ರೌಡಿಸಂ ಜಗತ್ತಿಗೆ ಸಿಂಹ ಸ್ವಪ್ನ ವಾಗಿದ್ದರು . ಈ ಹಿಂದೆ ಮಾರ್ಕೆಟ್ ಲೋಕಿ ಬಂಧನ, ಗೋಲ್ಡ್ ಕೇಸ್ ಸೆರಿದಂತೆ ಹಲವು ಪ್ರಕರಣಗಳಲ್ಲಿ ಈ ಹಿಂದೆ ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸದ ಎಸ್ ಪಿ ಗಳ ಜೊತೆ ಕರ್ತವ್ಯ ನಿರ್ವಹಿಸಿ ಹಲವು ಕ್ಲೂ ಲೆಸ್ ಪ್ರಕರಣಗಳನ್ನು ಬೇಧಿಸುವಲ್ಲಿ ಡಿ ವೈ ಎಸ್ ಪಿ ಜೆ ಜೆ ತಿರುಮಲೇಶ್ ಸಹಕಾರಿಯಾಗಿದ್ದರು.
ಚಿಕ್ಕಮಗಳೂರಿನ ಲೋಕಯುಕ್ತ ಡಿವೈಎಸ್ಪಿ ಆಗಿದ್ದ ಡಿವೈ ಎಸ್ ಪಿ ಜೆ ಜೆ ತಿರುಮಲೇಶ್ ಶಿವಮೊಗ್ಗ ಉಪವಿಭಾಗ-ಎ ಭಾಗಕ್ಕೆ ವರ್ಗಾಯಿಸಲಾಗಿದೆ. ಮತ್ತೆ ಶಿವಮೊಗ್ಗಕ್ಕೆ ಎಂಟ್ರಿ ಕೊಡುತ್ತಿರುವ ತಿರುಮಲೇಶ್ ಹಲವು ರೌಡಿಗಳಿಗೆ ಭಯ ಹುಟ್ಟಿಸುತ್ತಿದೆ . ಇವರ ಕಾರ್ಯವೈಖರಿ ಹಾಗೂ ಅನುಭವ ಶಿವಮೊಗ್ಗ ಪೊಲೀಸ್ ಇಲಾಖೆಗೆ ಇನ್ನು ಹೆಚ್ಚು ಉಪಯುಕ್ತ ವಾಗಲಿದ್ಯಾ ಕಾಡು ನೋಡಬೇಕಿದೆ .
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply