ನಕ್ಸಲ್ ಮುಖಂಡ ಬಿ ಜಿ ಕೃಷ್ಣಮೂರ್ತಿ ಶಿವಮೊಗ್ಗ ಕೋರ್ಟ್ ಗೆ ಹಾಜರ್ ! ಬಿ.ಜಿ.ಕೆ ಮೇಲೆ ಯಾವೆಲ್ಲಾ ಕೇಸ್ ಗಳಿವೆ ? ಎಲ್.ಎಲ್.ಬಿ ಮಾಡಿದವನು ನಕ್ಸಲ್ ಆಗಿದ್ದೀಕೆ ?

ನಕ್ಸಲ್ ಮುಖಂಡ ಬಿ ಜಿ ಕೃಷ್ಣಮೂರ್ತಿ ಶಿವಮೊಗ್ಗ ಕೋರ್ಟ್ ಗೆ ಹಾಜರ್ ! ಬಿ.ಜಿ.ಕೆ ಮೇಲೆ ಯಾವೆಲ್ಲಾ ಕೇಸ್ ಗಳಿವೆ ? ಎಲ್.ಎಲ್.ಬಿ ಮಾಡಿದವನು ನಕ್ಸಲ್ ಆಗಿದ್ದೀಕೆ ?

ಶಿವಮೊಗ್ಗ : ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ಬಿ ಜಿ ಕೃಷ್ಣಮೂರ್ತಿ ಯನ್ನು ಶಿವಮೊಗ್ಗ ಪೊಲೀಸರು ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ನೆನ್ನೆ ಬುಧವಾರ ಹಾಜರು ಪಡಿಸಿದರು. ಮಂಗಳವಾರ ರಾತ್ರಿ ಶಿವಮೊಗ್ಗಕ್ಕೆ ಕರೆತಂದಿದ್ದ ತೀರ್ಥಹಳ್ಳಿ ಪೊಲೀಸರು ಬಾಡಿ ವಾರಂಟ್ ಮೇಲೆ ಬಿಗಿ ಬಂದೋಬಸ್ತ್ ನಲ್ಲಿ ಕೋರ್ಟ್ ಗೆ ಹಾಜರು ಪಡಿಸಿದರು.

2021ರ ನವೆಂಬರ್‌ನಲ್ಲಿ ಕೇರಳ ಪೊಲೀಸರಿಂದ ಬಂಧಿತನಾಗಿದ್ದ ಬಿ.ಜಿ ಕೃಷ್ಣಮೂರ್ತಿ ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಲ್ಲಿದ್ದರು. ನಕ್ಸಲ್ ನಾಯಕ ಬಿ ಜಿ ಕೃಷ್ಣಮೂರ್ತಿಯ ವಿರುದ್ಧ ಚಿಕ್ಕಮಗಳೂರು, ಉಡುಪಿ ಮತ್ತು ಶಿವಮೊಗ್ಗದಲ್ಲಿ ಕೇಸ್ ಗಳು ದಾಖಲಾಗಿದ್ದವು. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲ್ಲೂರು ಅಂಗಡಿ ಬಸ್ ಸುಟ್ಟ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬಿಜಿಕೆ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಬಂಧ ಕೋರ್ಟ್ ಗೆ ಹಾಜರುಪಡಿಸಲಾಗಿದೆ ಎಂದು ತಿಳಿದಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಕ್ರೈಂ ನಂ 51/2009,174/2007 12/2009 ಪ್ರಕರಣದಲ್ಲಿ ಇಂದು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ಮೂರು ಪ್ರಕರಣಗಳಲ್ಲಿ ಒಂದು ತೀರ್ಥಹಳ್ಳಿ ಮತ್ತು ಎರಡು ಪ್ರಕರಣ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. 

 ವಿಶೇಷ ಏನೆಂದರೆ ಎಲ್​ಎಲ್​ಬಿ ಓದಿರುವ ಬಿಜಿಕೆ ತನ್ನ ವಿರುದ್ಧದ ಪ್ರಕರಣಗಳಲ್ಲಿ ತಾನೇ ಕೋರ್ಟ್​ನಲ್ಲಿ ವಾದ ಮಂಡಿಸುತ್ತಿದ್ದಾನೆ. 

 ಬಿಜಿಕೆ ಮಲತಃ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಸಮೀಪದ ಬುಕ್ಕಡಿಬೈಲ್ ನಿವಾಸಿ ಬಿ.ಜಿ. ಕೃಷ್ಣ ಮೂರ್ತಿಗೆ ಆರು ಮಂದಿ ಸೋದರಿಯರಿದ್ದಾರೆ. ಶೃಂಗೇರಿ ಕಾಲೇಜಿ ನಲ್ಲಿ ಪದವಿ ಶಿಕ್ಷಣ ಪೂರೈಸಿದ ಬಳಿಕ ಶಿವಮೊಗ್ಗದ ನ್ಯಾಷನಲ್ ಲಾ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಎರಡರಲ್ಲೂ ರ್ಯಾಂಕ್ ಗಳಿಸಿದ್ದ ಬಿಜಿಕೆ ಕೆಲ ಸಮಯ ಪತ್ರಕರ್ತನಾಗಿ ಕೂಡ ಕೆಲಸ ನಿರ್ವ ಹಿಸಿದ್ದರು.

ಬಿ.ಜಿ.ಕೃಷ್ಣಮೂರ್ತಿ ವಿರುದ್ಧ ಸುಮಾರು 62 ಪ್ರಕರಣಗಳಿವೆ. ಕೇರಳದಲ್ಲಿ 4, ಬೆಂಗಳೂರಿನಲ್ಲಿ 18, ಉಡುಪಿ, ಕಾರ್ಕಳ, ಶೃಂಗೇರಿ, ತೀರ್ಥಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.