ನಡು ರೋಡಲ್ಲಿ ಪೊಲೀಸರಿಗೆ ಅವಾಜ್ ಹಾಕಿದ ರೌಡಿಶೀಟರ್ ! ಇಬ್ಬರು ಅಂದರ್ ! ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು ?
ಶಿವಮೊಗ್ಗ : ನಗರದ ಡಯೆಟ್ ಸಮೀಪ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸಲು ವೀರಭದ್ರೇಶ್ವರ ಸರ್ಕಲ್ ನಲ್ಲಿ ನಿಂತಿದ್ದರು.
ತಪಾಸಣೆ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಪೊಲೀಸ್ ರನ್ನ ಗಮನಿಸಿ ಯು ಟರ್ನ್ ತೆಗೆದುಕೊಳ್ಳಲು ಮುಂದಾಗಿ ಒಬ್ಬ ಕೆಳಗೆ ಬಿದ್ದಿದ್ದಾನೆ. ಕೆಳಕ್ಕೆ ಬಿದ್ದವನನ್ನ ಆತನನ್ನ ಪೊಲೀಸ್ ಪೇದೆ ಹೊಡೆದು ಬೀಳಿಸಿದ್ದಾನೆ ಎಂದು ಅಲ್ಲಿದ್ದ ಇನ್ನೊಬ್ಬ ರೌಡಿಶೀಟರ್ ಕಿರಿಕ್ ತೆಗೆದಿದ್ದಾನೆ.
ಈ ವೇಳೆ ರೌಡಿಶೀಟರ್ ಒಬ್ಬ ಪೊಲೀಸರಿಗೆ ಅವಾಚ್ಯಾವಾಗಿ ನಿಂದಿಸಿದ್ದಾನೆ. ಮರ್ಡರ್ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದಾನೆ. ನಡುರಸ್ತೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಬರುವುದು ಕಾನೂನು ಉಲ್ಲಂಘನೆಯಾಗಿದ್ದು
ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು ?
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಮೊಗ್ಗ ಎಸ್ ಪಿ ಜಿ ಕೆ ಮಿಥುನ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು.
ಸದ್ಯ ಪ್ರಕರಣದಲ್ಲಿರುವ ಆರೋಪಿಗಳು ರೌಡಿ ಶೀಟರ್ಸ್ ಆಗಿದ್ದು ಅವರ ವಿರುದ್ಧ ಎಫ್ಐಆರ್ ಆಗಿದ್ದು, ಅವರನ್ನ ಬಂಧಿಸಲಾಗಿದೆ. ಮಂಗಳವಾರ 30ನೇ ತಾರೀಕಿಗೆ ಘಟನೆ ನಡೆದಿದ್ದು. ಇವರುಗಳ ಮೇಲೆ 504,506,189,342,353,149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕರ್ತವ್ಯದಲ್ಲಿದ್ದಾಗ ಅಡ್ಡಿ ಪಡಿಸುವುದು ತಪ್ಪಾಗುತ್ತದೆ. ಇಬ್ಬರು ಬಂಧಿಸಲಾಗಿದೆ ಇನ್ನೂ ಇಬ್ಬರನ್ನೂ ಹುಡುಕುತ್ತಿದ್ದೇವೆ. ಇಬ್ಬರು ಸಹ ರೌಡಿ ಶೀಟರ್ ಗಳಾಗಿದ್ದಾರೆ. ಇಂತವರ ಮೇಲೆ ನಿರ್ದಾಕ್ಷಣಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply