ನಡು ರಸ್ತೆಯಲ್ಲಿ ಗನ್ ಹಿಡಿದು ಯುವಕನ ಹುಚ್ಚಾಟ ! ಜನರಲ್ಲಿ ಆತಂಕ ! ಪೊಲೀಸರ ಮುಂದೆ ಬಹಿರಂಗವಾಯಿತು ಪಿಸ್ತೂಲಿನ ಅಸಲಿಯತ್ತು ?

ನಡು ರಸ್ತೆಯಲ್ಲಿ ಗನ್ ಹಿಡಿದು ಯುವಕನ ಹುಚ್ಚಾಟ ! ಜನರಲ್ಲಿ ಆತಂಕ ! ಪೊಲೀಸರ ಮುಂದೆ ಬಹಿರಂಗವಾಯಿತು ಪಿಸ್ತೂಲಿನ ಅಸಲಿಯತ್ತು ?

ಸಾಗರ : ಪಾನಮತ್ತನಾದ ಯುವಕನೊಬ್ಬ ಗನ್ ಹಿಡಿದು ರಸ್ತೆಯಲ್ಲಿ ಸಾರ್ವಜನಿಕರಿಗೆ ಬೆದರಿಕೆ ಒಡ್ಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಗರದ ಮಾರುಕಟ್ಟೆ ರಸ್ತೆ ಹಿಂಭಾಗದಲ್ಲಿ ನಡೆದಿದೆ.

ಫೆ .11ರ ರಾತ್ರಿ ಯುವಕರ ಮಧ್ಯೆ ಗಲಾಟೆಯಾಗಿತ್ತು. ಈ ವೇಳೆ ದರ್ಶನ್‌, ಪಿಸ್ತೂಲು ತೋರಿಸಿದ್ದ. ಇದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದರು. ಕೆಲವರು ಗಲಾಟೆಯ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ನಕಲಿ ಗನ್ ಹಿಡಿದು ಮದ್ಯ ಸೇವಿಸಿ ಬಂದ ಯುವಕ ಭಾನುವಾರ ಸಂಜೆ ವೇಳೆಗೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದಾನೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ನಡು ರಸ್ತೆಯಲ್ಲಿ ನಿಂತು ಶೂಟ್ ಮಾಡುವುದಾಗಿ ಸ್ಥಳೀಯರಿಗೆ ಬೆದರಿಕೆ ಒಡ್ಡಿದ್ದು, ಆತನ ಕೈಯಲ್ಲಿದ್ದ ಗನ್ ನೋಡಿ ಸ್ಥಳೀಯರು ಕೆಲಕಾಲ ಆತಂಕಗೊಂಡಿದ್ದರು. ಬಳಿಕ ಕೆಲವು ವ್ಯಕ್ತಿಗಳು ಸೇರಿ ಆತನಿಗೆ ಥಳಿಸಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಾಗರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಆಯನೂರಿನ ದರ್ಶನ್‌ (19) ಮತ್ತು ಸಾಗರದ ನವೀನ್‌ (25) ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಈ ವೇಳೆ ಆಟಿಕೆ ಪಿಸ್ತೂಲು ಪ್ರದರ್ಶಿಸಿರುವುದಾಗಿ ಯುವಕರು ಹೇಳಿದ್ದಾರೆ. ಈ ಪ್ರಕರಣ ಸಂಬಂಧ ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.