ಸಂಸದ ಬಿವೈಆರ್ ಪ್ರಯತ್ನಕ್ಕೆ ಫಲ ! ಶಿವಮೊಗ್ಗ ಸುಸ್ಸಜ್ಜಿತ ವೆಲ್ ನೆಸ್ ಸೆಂಟರ್ ! ವೆಲ್ ನೆಸ್ ಸೆಂಟರ್ ನ ಲಾಭವೇನು?
ಶಿವಮೊಗ್ಗ : ಶಿವಮೊಗ್ಗದಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ಸಿಜಿಹೆಚ್‌ಎಸ್ ವೆಲ್‌ನೆಸ್ ಸೆಂಟರ್ ಆರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಮನ್ ಸುಖ್ ಮಾಂಡವಿಯಾ ಅವರನ್ನು ಭೇಟಿ ಮಾಡಿದ ಸಂಸದ ಬಿವೈಆರ್ ಅವರು ಕೇಂದ್ರ ಸರ್ಕಾರಿ ನೌಕರರ ಮತ್ತು ನಿವೃತ್ತ ನೌಕರರ ಕುಟುಂಬಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ಆರೋಗ್ಯ ಸೇವೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಕ್ಷೇಮ ಕೇಂದ್ರವನ್ನು ಆರಂಭಿಸಲು ಈ ಹಿಂದೆಮನವಿ ಸಲ್ಲಿಸಿದ್ದನ್ನು ಗಮನಕ್ಕೆ ತಂದರು.
ಸಂಸದರ ಈ ಹಿಂದಿನ ಮನವಿಗೆ ಸ್ಪಂದಿಸಿದ ಸಚಿವರು ಶಿವಮೊಗ್ಗದಲ್ಲಿ ಸೆಂಟರ್ ಆರಂಭಿಸಲು ಅಗತ್ಯವಿರುವ ಮೂಲಭೂತ ಸೌಕರ್ಯ ಸೇರಿದಂತೆ ಮತ್ತಿತರೆ ಅಂಶಗಳ ಬಗ್ಗೆ ಕೂಲಂಕುಶ ಸ್ಥಳ ಪರಿಶೀಲನೆ ನಡೆಸಿ ಹೆಚ್ಚುವರಿ ನಿರ್ದೇಶಕರನೇತೃತ್ವದ ತಂಡ ರಚಿಸಿ ಕಳಿಸಿದ್ದರು.
ಈ ತಂಡವು ಶಿವಮೊಗ್ಗಕ್ಕೆ ಬಂದಿದ್ದ ಸಂದರ್ಭದಲ್ಲಿ ಸಂಸದ ರೊಂದಿಗೆ ಹಲವು ಕಟ್ಟಡಗಳನ್ನು ವೀಕ್ಷಿಸಿ ಅಂತಿಮವಾಗಿ ಶರಾವತಿ ನಗರದ ಹಳೆಯ ಬಿಎಸ್‌ಎನ್‌ಎಲ್ ಕಟ್ಟಡ ವನ್ನು ಆಯ್ಕೆ ಮಾಡಿ ಅಲ್ಲಿ ಸಿಜಿಹೆಚ್‌ಎಸ್ ವೆಲ್‌ನೆಸ್ ಸೆಂಟರ್ ಸ್ಥಾಪನೆ ಮಾಡಲು ಶಿಫಾರಸ್ಸು ಮಾಡಿದ್ದರು. ಇದೀಗ ಕೇಂದ್ರ ಸಚಿವರು ಇದಕ್ಕೆ ಸಮ್ಮತಿಸಿದ್ದಾರೆಂದು ಬಿವೈಆರ್ ಸಂತಸ ವ್ಯಕ್ತಪಡಿಸಿದ್ದಾರೆ.
ವೆಲ್ ನೆಸ್ ಸೆಂಟರ್ ಲಾಭವೇನು?
ಶಿವಮೊಗ್ಗ ಜಿಲ್ಲೆಯ 7518 ಹಾಗೂ ದಾವಣಗೆರೆ ಜಿಲ್ಲೆಯ4888, ಚಿತ್ರದುರ್ಗ ಜಿಲ್ಲೆಯ 2079 ನೆರೆ ತಾಲ್ಲೂಕು ಗಳವ್ಯಾಪ್ತಿಯಲ್ಲಿಸುಮಾರು14ಸಾವಿರಕ್ಕೂ ಹೆಚ್ಚಿನಸಂಖ್ಯೆಯ ಬಿ.ಎಸ್.ಎನ್.ಎಲ್., ಪೋಸ್ಟಲ್, ಇನಕಂಟ್ಯಾಕ್ಸ್, ಞಪ್ರಾವಿಡೆಂಡ್ ಫಂಡ್, ಸೆಂಟ್ರಲ್ ಎಕ್ರೈಸ್, ನಿವೃತ್ತ ಅರೆ ಸೇನಾ ಪಡೆ, ಕೇಂದ್ರೀಯ ವಿದ್ಯಾಲಯ, ರಾಷ್ಟ್ರೀಯ ರಕ್ಷಾ ಯೂನಿವರ್ಸಿಟಿ ಮತ್ತಿತರೆ ಕೇಂದ್ರ ಸರ್ಕಾರದ ನೌಕರರು ಹಾಗೂ ನಿವೃತ್ತ ನೌಕರರ ಮತ್ತು ಕುಟುಂಬವರ್ಗ ದವರುಗಳ ಕ್ಷೇಮಾಭಿವೃದ್ಧಿಯನ್ನು ಕಾಪಾಡಿಕೊಂಡು ಬರಲು ಈ ಒಂದು ಸುಸರ್ಜಿತ ಕ್ಷೇಮ ಕೇಂದ್ರದ ಅತ್ಯಂತ ಉಪಯುಕ್ತವಾಗಲಿದೆ. ಹಾಗೆಯೇ ಈಗ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿರುವ ಕ್ಷೇಮ ಕೇಂದ್ರಗಳನ್ನು ಅವಲಂಬಿಸಿದ್ದ ನೌಕರರಿಗೆ ಶಿವಮೊಗ್ಗ ದಲ್ಲಿ ಪ್ರಾರಂಭವಾಗುತ್ತಿರುವ (Central Government Health Scheme-Wellness Centre) ಅನುಮತಿ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಔಷದೋಪಚಾರಗಳು ಉಚಿತವಾಗಿ ತ್ವರಿತ ಗತಿಯಲ್ಲಿ ದೊರೆಯುತ್ತದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply