BIG BREAKING NEWS : ಶಿವಮೊಗ್ಗದ ಹುಂಡೈ ಕಾರ್ ಶೋ ರೂಂನಲ್ಲಿ ಬೆಂಕಿ ! ಧಗ ಧಗ ಹೊತ್ತಿ ಉರಿದ ಶೋರೂಮ್! ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ
ಶಿವಮೊಗ್ಗ : ನಗರದ ಪ್ರತಿಷ್ಠಿತ ಹುಂಡೈ ಕಾರ್ ಶೋರೂಮ್ ಬೆಂಕಿ ಹೊತ್ತು ಉರಿದಿದೆ. ಶೋರೂಮ್ ನ ಮೇಲ್ಚಾವಣಿ ಬೆಂಕಿಯಿಂದ ಹೊತ್ತು ಉರಿಯುತ್ತಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿದ್ದಾರೆ
ಶಂಕರಮಠ ರಸ್ತೆಯಲ್ಲಿರುವ ಹುಂಡೈ ಶೋ ರೂಂನಲ್ಲಿ ಘಟನೆ ಸಂಭವಿಸಿದೆ. ಶೋ ರೂಂನ ಮೇಲ್ಛಾವಣಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಶೋ ರೂಂ ಸಿಬ್ಬಂದಿಗಳು, ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಶೋರೂಮ್ ನಲ್ಲಿ ಲಕ್ಷಾಂತರ ಮೌಲ್ಯದ ಕಾರುಗಳು ಇದ್ದು, ಸುಟ್ಟು ಕರಕಲಾಗಿದೆ ಲಕ್ಷಾಂತರ ರೂ ಮೌಲ್ಯದ ವಾಹನಗಳ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಇನ್ನೂ ಶೋರೂಮ್ ಮುಂದೆ ನೂರಾರು ಜನ ಜಮಾಹಿಸಿದ್ದು. ಬೆಂಕಿ ಹೊತ್ತಿಕೊಳ್ಳಲು ಸ್ಪಷ್ಟವಾದ ಕಾರಣ ಇನ್ನು ತಿಳಿದು ಬಂದಿಲ್ಲ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply