ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಾಣಿ, ಪಕ್ಷಿಗಳನ್ನು ಓಡಿಸುವ ಕೆಲಸ ಖಾಲಿ ! ವೈರಲ್ ಆಯ್ತು ನೋಟಿಫಿಕೇಷನ್ !

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಾಣಿ, ಪಕ್ಷಿಗಳನ್ನು ಓಡಿಸುವ ಕೆಲಸ ಖಾಲಿ ! ವೈರಲ್ ಆಯ್ತು ನೋಟಿಫಿಕೇಷನ್ !

ಶಿವಮೊಗ್ಗ :ಶಿವಮೊಗ್ಗ ವಿಮಾನ ನಿಲ್ದಾಣ ಪ್ರಾಣಿ, ಪಕ್ಷಿ ಓಡಿಸುವ ಹುದ್ದೆ ಸೃಷ್ಟಿಸಿದ್ದು, ಅದಕ್ಕೆ ಆಕರ್ಷಕ ಸಂಬಳವನ್ನೂ ನಿಗದಿ ಮಾಡಿ ಆಸಕ್ತ ಸಂಸ್ಥೆಗಳಿಂದ ಟೆಂಡರ್ ಕರಿದಿದೆ 

ಪ್ರಾಣಿ, ಪಕ್ಷಿಗಳನ್ನು ಹೆದರಿಸುವ ಮತ್ತು ಪೂರಕ ಸೇವೆಗಳನ್ನು ಒದಗಿಸಲು ಏಜನ್ಸಿಗಳಿಗೆ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ವಹಣೆ ಮಾಡುತ್ತಿರುವ ಕೆಎಸ್‌ಐಐಡಿಸಿ(ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ) ಟೆಂಡರ್‌ ಕರೆದಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ವಿಮಾನದ ಲ್ಯಾಂಡಿಂಗ್‌ ಮತ್ತು ಟೇಕಾಫ್‌ ಸಂದರ್ಭ ರನ್‌ ವೇ ಕ್ಲಿಯರ್‌ ಇರಬೇಕು. ಮತ್ತು ವಿಮಾನ ಇಳಿಯುವ ಸಂದರ್ಭದಲ್ಲಿ ರನ್‌ ವೇ ಮೇಲೆ ಪ್ರಾಣಿ, ಪಕ್ಷಿ ಬಂದರೆ ಅಪಘಾತಗಳು ನಡೆಯುವ ಸಾಧ್ಯತೆ ಹೆಚ್ಚಿರು ತ್ತದೆ. ಇನ್ನು ಟರ್ಮಿನಲ್‌ನಲ್ಲಿ ಪಕ್ಷಿಗಳ ಹಿಕ್ಕೆ ಬಿದ್ದರೆ ವಿಮಾನ ನಿಲ್ದಾಣ ದ ಗೌರವಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಪ್ರಾಣಿ, ಪಕ್ಷಿಗಳನ್ನು ಓಡಿಸಲು ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತದೆ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಾಣಿ, ಪಕ್ಷಿಗಳನ್ನು ಬೆದರಿಸಲು ಸದ್ಯ 13 ಸಿಬ್ಬಂದಿ ಇದ್ದಾರೆ. ಆದರೆ ಇವರೆಲ್ಲ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತರಬೇತಿ ಪಡೆದವರು. ಅವರನ್ನು ತಾತ್ಕಾಲಿಕವಾಗಿ ಇಲ್ಲಿ ನೇಮಿಸಲಾಗಿದೆ. ಶಿವಮೊಗ್ಗಕ್ಕೆ ಪೂರ್ಣಾವಧಿ ಸಿಬ್ಬಂದಿ ಅಗತ್ಯವಿರುವ ಹಿನ್ನೆಲೆ ಏಜೆನ್ಸಿಗೆ ಟೆಂಡರ್‌ ಕರೆಯಲಾಗಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.