BREAKING NEWS : ಶಾಲಾ ಬಸ್ ಪಲ್ಟಿ ! ಪ್ರಾಣಾಪಾಯದಿಂದ ವಿದ್ಯಾರ್ಥಿಗಳು ಪಾರು !

BREAKING NEWS : ಶಾಲಾ ಬಸ್ ಪಲ್ಟಿ ! ಪ್ರಾಣಾಪಾಯದಿಂದ ವಿದ್ಯಾರ್ಥಿಗಳು ಪಾರು !

ಭದ್ರಾವತಿ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬೈಪಾಸ್ ರಸ್ತೆಯಲ್ಲಿ ಖಾಸಗಿ ಶಾಲಾ ಬಸ್ ಪಲ್ಟಿಯಾಗಿರುವ ಘಟನೆ ನಡೆದಿದೆ . ಭದ್ರಾವತಿ ಬೈಪಾಸ್ ರಸ್ತೆಯ ಬಿಳಕಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು . ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ .

ಹೇಗಾಯ್ತು ಅಪಘಾತ ?

ಖಾಸಗಿ ಶಾಲಾ ವಾಹನ ಮತ್ತು ಇನ್ನೊಂದು ಭಾರಿ ವಾಹನ ಒಂದರ ಹಿಂದೆ ಒಂದರಂತೆ ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಸಾಗುತ್ತಿದ್ದವು . ಈ ವೇಳೆ ಅಡ್ಡ ದಿಡ್ಡಿ ಕಾರು ಚಲಾಯಿಸಿಕೊಂಡು ಬಂದ ಕಾರು ಚಾಲಕನೊಬ್ಬ ಓವರ್ ಟೇಕ್ ಮಾಡಲು ಹೋಗಿ ಎರಡು ವಾಹನಗಳ ನಡುವೆ ಕಾರು ನುಗ್ಗಿಸಿದ್ದಾನೆ . ಗಾಬರಿಗೊಂಡ ಬಸ್ ಚಾಲಕ ಅಫಘಾತವನ್ನು ತಪ್ಪಿಸಲು ಬಸ್ ಅನ್ನು ಕೊಂಚ ಎಡಕ್ಕೆ ತಿರುಗಿಸದ್ದಾನೆ ಈ ಸಂಧರ್ಭದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ಸ ರಸ್ತೆ ಪಕ್ಕಕ್ಕೆ ಉರುಳಿ ಪಲ್ಟಿಯಾಗಿದೆ .

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಇನ್ನು ಪಲ್ಟಿಯಾಗಿದ್ದ ಬಸ್ ನಲ್ಲಿ ಇದ್ದ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು , ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ , ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಪೊಲೀಸರು ಪೋಷಕರಿಗೆ ಹೇಳಿದ್ದಾರೆ

ಇನ್ನು ಘಟನೆಯಿಂದಾಗಿ ಕೆಲ ಕಾಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು , ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಅಪಘಾತವಾಗಿದ್ದ ವಾಹನವನ್ನು ತೆರವುಗೊಳಿಸಿ , ಸಂಚಾರ ದಟ್ಟಣೆಯನ್ನು ಸರಿಪಡಿಸಿದ್ದಾರೆ . ಸಂಚಾರಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ .

ವರದಿ : ಲಿಂಗರಾಜ್ ಗಾಡಿಕೊಪ್ಪ


Leave a Reply

Your email address will not be published.