ಶಿವಮೊಗ್ಗದ ಹುಂಡೈ ಶೋ ರೂಮ್ ಅಗ್ನಿ ಅವಘಡ  : ಪಕ್ಕದ ಟಾಟಾ ಶೋ ರೂಮ್ ಕಾರ್ ಗಳಿಗೂ ಹಾನಿ ! ಅಗ್ನಿಶಾಮಕ ದಳದ ಒರ್ವ ಸಿಬ್ಬಂದಿಗೆ ಗಾಯ ! ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ?

ಶಿವಮೊಗ್ಗದ ಹುಂಡೈ ಶೋ ರೂಮ್ ಅಗ್ನಿ ಅವಘಡ : ಪಕ್ಕದ ಟಾಟಾ ಶೋ ರೂಮ್ ಕಾರ್ ಗಳಿಗೂ ಹಾನಿ ! ಅಗ್ನಿಶಾಮಕ ದಳದ ಒರ್ವ ಸಿಬ್ಬಂದಿಗೆ ಗಾಯ ! ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ? 

ಶಿವಮೊಗ್ಗ : ನಗರದ ಶಂಕರ ಮಠ ರಸ್ತೆಯಲ್ಲಿರುವ ರಾಹುಲ್ ಹುಂಡೈ ಶೋರೂಮ್ ಗೆ ತಡರಾತ್ರಿ ಬೆಂಕಿ ಹೊತ್ತಿಕೊಂಡು ಉರಿದಿದ್ದು, ರಾತ್ರಿ ಶೋರೂಮ್ ಮುಂಬಾಗ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಶೋರೂಮ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ 

ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಮಾಹಿತಿ ತಿಳಿದುಕೊಡಲೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದರು. ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡಿರುವ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಮೂರುವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ತಡರಾತ್ರಿ ಒಂದುವರೆ ಗಂಟೆಗೆ ಬೆಂಕಿ ನಂದಿಸಿದ್ದಾರೆ. ಈ ವೇಳೆ ಬೆಂಕಿ ಕಿಡಿ ಸಿಡಿದು ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿಗೆ ಗಾಯ ಕೂಡ ಆಗಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಹುಂಡೈ ಶೋರೂಮ್ ಎರಡು ಅಂತಸ್ತಿನ ಕಟ್ಟಡವಾಗಿದ್ದು, ಮೇಲೆ ಶೋರೂಮ್ ಇದ್ದು ಕೆಳಗಡೆ ಸರ್ವಿಸ್ ಸೆಂಟರ್ ಇದೆ, ರಾಹುಲ್ ಹೂಂಡೈನ ಶೋರೂಮ್ ನಲ್ಲಿದ್ದ ಕೋಟ್ಯಾಂತರ ರೂ. ಮೌಲ್ಯ ಆಯಿಲು, ಫರ್ನೀಚರ್ ಗಳು ಸುಟ್ಟುಕರಕಲಾಗಿವೆ. ರಾತ್ರಿ ಹೊತ್ತು ಬೆಂಕಿ ಹೊತ್ತಿಕೊಂಡಿದ್ದು ಕಚೇರಿಯಲ್ಲಿ ಸಿಬ್ಬಂದಿ ಯಾರು ಇಲ್ಲದಿದ್ದ ಕಾರಣ ಯಾವ ಸಾವು ನೋವು ಕೂಡ ಸಂಭವಿಸಿಲ್ಲ.

ಇನ್ನು ಶೋರೂಮ್ ಗೆ ಹೊತ್ತಿಕೊಂಡಿರುವ ಬೆಂಕಿಯ ಕೆನ್ನಾಲಿಗೆ ಅಕ್ಕ ಪಕ್ಕದ ಕಟ್ಟಡಗಳಿಗೆ ಹಾನಿಯನ್ನುಂಟು ಮಾಡಿದೆ, ಬೆಂಕಿಯ ಜ್ವಾಲೆಯಿಂದ ಪಕ್ಕದ ಟಾಟಾ ಶೋರೂಮ್ ಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ, ಮತ್ತು ಹುಂಡೈ ಶೋರೂಮ್ ಮತ್ತು ಟಾಟಾ ಶೋ ರೂಮ್ ಮಧ್ಯೆ ಇರುವ ಕಾಂಪೌಂಡ್ ಒಳಗಡೆ ಇದ್ದ ಟಾಟಾ ಶೋರೂಮ್ ನ ಕಾರುಗಳು ಬೆಂಕಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.