ಹೆಂಡ್ತಿ ಜೊತೆ ಎದುರುಮನೆ ಯುವಕನ ಮಾತು ! ನನ್ನ ಹೆಂಡ್ತಿ ಜತೆ ನಿಂಗೇನೋ ಕೆಲ್ಸ ? ಎಂದು ಸಿಟ್ಟಿಗೆದ್ದ ಗಂಡನಿಂದ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ !
ಶಿವಮೊಗ್ಗ : ಪತ್ನಿ ಜೊತೆ ಎದುರು ಮನೆ ಯುವಕ ಮಾತನಾಡಿಸುತ್ತಿದ್ದಾನೆ ಎಂಬ ಕಾರಣಕ್ಕೆ ಪತಿಯೊಬ್ಬ ಯುವಕರ ಮೇಲೆ ದಾಳಿ ಮಾಡಿದ್ದಾನೆ. ಕತ್ತಿ ಮತ್ತು ರಾಡ್ನಿಂದ ಮೊದಲು ಯುವಕನ ಕಾರಿನ ಮೇಲೆ ದಾಳಿ ಮಾಡಿದ ವ್ಯಕ್ತಿ, ಯುವಕ ಮನೆಯಿಂದ ಹೊರಬರುತ್ತಿದ್ದಂತೆಯೇ ಆತನ ಮೇಲೂ ಎರಗಿದ್ದಾನೆ.ಮಾರಣಾಂತಿಕವಾಗಿ ಇಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ನಡೆದಿದೆ .
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಲಮಕ್ಕಿಯಲ್ಲಿ ಈ ಘಟನೆ ನಡೆದಿದ್ದು. ಮೊದಲು ಕತ್ತಿ, ರಾಡ್ನಿಂದ ಮನೆಯಿಂದ ಹೊರಬಂದ ಯುವಕ ನವೀನ್ ಮೇಲೆ ದಾಳಿ ನಡೆಸಿದ್ದ ಆರೋಪಿ ರವಿ.ನಂತರ ಆತನ ಸ್ನೇಹಿತ ಧರೇಶ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಕತ್ತಿ ದಾಳಿಯಿಂದ ಬೆರಳು ಕಟ್ ಆಗಿದ್ದು, ಎದೆ ಭಾಗದಲ್ಲಿ ಗಂಭೀರ ಗಾಯವಾಗಿದೆ.
ಇನ್ನು ಗಾಯಾಳು ನವೀನ್ನನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದರೆ, ಮತ್ತೊಬ್ಬ ಗಾಯಾಳು ಧರೇಶ್ಗೆ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಸಾಗರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ರವಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ಮಾತನಾಡಿಸಿದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದನೆ?, ಅಥವಾ ಹಳೆಯ ದ್ವೇಷವೇನಾದರೂ ಇತ್ತೆ. ಈ ರೀತಿಯ ಹಲವಾರು ಆಯಾಮಗಳಲ್ಲಿ ತನಿಖೆ ಶುರುವಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply