ಜೋಕಾಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಕೊರಳಿಗೆ ಉರುಳು ಬಿದ್ದು ಬಾಲಕ ಸಾವು !

ಜೋಕಾಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಕೊರಳಿಗೆ ಉರುಳು ಬಿದ್ದು ಬಾಲಕ ಸಾವು !

ಶಿವಮೊಗ್ಗ : ಜೋಕಾಲಿಯಲ್ಲಿ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಕೊರಳಿಗೆ ಉರುಳು ಬಿದ್ದು ಬಾಲಕ ಮೃತಪಟ್ಟ ಘಟನೆ ತಾಲ್ಲೂಕಿನ ಸವಳಂಗ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ಪಿ.ಜೆ. ಕೊಟ್ರೇಶಿ (13) ಮೃತ ಬಾಲಕ.

ಶಾಲೆಯಿಂದ ಮನೆಗೆ ಬಂದವನೇ ನಡುಮನೆಯಲ್ಲಿ ಕೂಸು ಆಡಿಸಲು ಹಾಕಿದ್ದ ಜೋಕಾಲಿಯಲ್ಲಿ ಆಡುವಾಗ ದುರ್ಘಟನೆ ನಡೆದಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಸೇರಲು ಫೋಟೋ ಮೇಲೆ ಕ್ಲಿಕ್ ಮಾಡಿ 

ಶಿವಮೊಗ್ಗ ಜ್ಞಾನಸಾಗರ ವಿದ್ಯಾಸಂಸ್ಥೆಯಲ್ಲಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಬಾಲಕನ ತಂದೆ ಎನ್.ಜಿ. ಪ್ರವೀಣ ನೀಡಿದ ದೂರಿನನ್ವಯ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.