ಪ್ರೀತಿಸುವಂತೆ ಯುವಕನ ಕಿರುಕುಳ ! ಕಿರುಕುಳ ತಾಳಲಾರದೆ ಅಪ್ರಪ್ತಾ ಬಾಲಕಿ ನೇಣಿಗೆ ಶರಣು !
ಶಿವಮೊಗ್ಗ : ಪ್ರೀತಿಸುವಂತೆ ಯುವಕನ ಕಿರುಕುಳ ನೀಡಿದ್ದಾನೆ ಈ ವೇಳೆ ಯುವಕನ ಕಿರುಕುಳ ತಾಳಲಾರದೆ 14 ವರ್ಷದ ಅಪ್ರಾಪ್ತ ಬಾಲಕಿ ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಗೊಂದಿಚಟ್ನಹಳ್ಳಿಯಲ್ಲಿ ನಡೆದಿದೆ.
ಯುವಕನೊಬ್ಬ 14 ವರ್ಷದ ಬಾಲಕಿಯ ಹಿಂದೆ ಬಿದ್ದು ಪ್ರೀತಿಸುವಂತೆ ಕಿರುಕುಳ ನೀಡಿದ್ದಾನೆ. ಈ ವೇಳೆ ಯುವಕನ ಕಿರುಕುಳ ತಾಳಲಾರದೆ ಬಾಲಕಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳ ಮಾಹಿತಿಯ ಪ್ರಕಾರ ತಿಳಿದು ಬಂದಿದೆ.
ಹಲವು ತಿಂಗಳ ಹಿಂದೆ ಗೊಂದಿಚಟ್ನಹಳ್ಳಿ ಗ್ರಾಮದ ನಿವಾಸಿ ತ್ಯಾಗರಾಜ್ ಎಂಬ 23 ವರ್ಷದ ಯುವಕ 14 ವರ್ಷದ ವರ್ಷಿಣಿ ಎಂಬ ಅಪ್ರಾಪ್ತೆ ಬಾಲಕಿಯ ಹಿಂದೆ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದನು. ಆತನ ಪ್ರೀತಿಯನ್ನ ವರ್ಷಿಣಿ ನಿರಾಕರಿಸಿದ್ದಳು ಎಂದು ಕುಟುಂಬ ತಿಳಿಸಿದೆ.
ಆತ್ಮಹತ್ಯೆಗೆ ಶರಣಾಗಿರುವ ಬಾಲಕಿಯನ್ನ ವರ್ಷಣಿ (14) ಎಂದು ಹೇಳಲಾಗುತ್ತಿದೆ. ಶಿವಮೊಗ್ಗ ತಾಲೂಕಿನ ಗೊಂದಿಚಟ್ನಹಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರೀತಿಸುವಂತೆ ತ್ಯಾಗರಾಜ್ ಎನ್ನುವ ವ್ಯಕ್ತಿ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಎರಡು ತಿಂಗಳ ಹಿಂದೆ ಬಾಲಕಿ ಪೋಷಕರು ಯುವಕನಿಗೆ ಎಚ್ಚರಿಕೆ ನೀಡಿದ್ದರು.
ಈ ವೇಳೆ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತ್ಯಾಗರಾಜ್ ಮತ್ತೆ ಬಾಲಕಿಗೆ ಕಾಟ ಕೊಡಲು ಶುರು ಮಾಡಿದ್ದಾನೆ. ಯುವಕನ ಕಾಟ ತಾಳಲಾರದೆ ನಿನ್ನೆ ಬಾಲಕಿ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಘಟನೆ ಕುರಿತಂತೆ ಶಿವಮೊಗ್ಗದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply