ಗೋಪಾಲಗೌಡ ಬಡಾವಣೆಯ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟ ! ಮನೆಯಲ್ಲಿದ್ದ ವಸ್ತುಗಳು ಹಾನಿ !
ಶಿವಮೊಗ್ಗ : ನಗರದ ಗೋಪಾಲಗೌಡ ಬಡಾವಣೆಯ ಕೃಷ್ಣ ಮಠದ ಸಮೀಪ ಇರುವ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ವಾಗಿರುವ ಘಟನೆ ನಡೆದಿದೆ.
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಗೊಂಡಿದೆ, ಸ್ಫೋಟದ ತೀವ್ರತೆಗೆ ಮನೆಯಲಿದ್ದ ವಸ್ತುಗಳೆಲ್ಲಾ ಚೆಲ್ಲಾ ಪಿಲ್ಲಿಯಾಗಿ ಹಾನಿಯಾಗಿದೆ.
ಕಳೆದ ವರ್ಷವಷ್ಟೇ ಕಟ್ಟಿದ್ದ ಮೊದಲನೇ ಮಹಡಿಯ ಹೊಸ ಮನೆಯಲ್ಲಿ ಎರಡು ಸಿಲಿಂಡರ್ ಸ್ಪೋಟಗೊಂಡು ಸಾಕಷ್ಟು ಹಾನಿಯಾಗಿರುವ ಘಟನೆ ಇಂದು ಬೆಳಿಗ್ಗೆ 11 : 15 ಕ್ಕೆ ಕೃಷ್ಣಮಠ ಪಾರ್ಕ್ ಹತ್ತಿರ ಪ್ರೊಫೆಸರ್ ಬಿ. ಕೃಷ್ಣಪ್ಪ ಅವರ ಮನೆಯಲ್ಲಿ ನಡೆದಿದೆ .
ಸ್ಫೋಟದ ತೀವ್ರತೆಗೆ ಮನೆಯ ಒಳಭಾಗ ಸಂಪೂರ್ಣ ಜಖಮ್ ಆಗಿದೆ ಹಾಗೂ ಅಕ್ಕ ಪಕ್ಕದ ಮನೆಯ ಕಿಟಕಿಗಳು ಹೊಡೆದು ಹೋಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ ಘಟನಾ ಸ್ಥಳಕ್ಕೆ ರಾಜ್ಯ ಅಗ್ನಿ ಶಾಮಕ ತುರ್ತು ಸೇವೆ ಹಾಗ. ಸ್ಥಳೀಯ ಠಾಣಾಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply