ತಲೆ ಮೇಲೆ ಕಾರು ಹತ್ತಿಸಿ ವ್ಯಕ್ತಿಯ ಬರ್ಬರ ಹತ್ಯೆ ! ರಸ್ತೆ ಬದಿಯಲ್ಲಿ ಶವ ಪತ್ತೆ !
ಶಿವಮೊಗ್ಗ : ಸಾಗರ ತಾಲೂಕಿನ ಆನಂದಪುರ ಸಮೀಪದ ನೆದರವಳ್ಳಿ ಬಳಿ ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾರ್ ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಸೊರಬದ ಅನವಟ್ಟಿಯ ಸಮೀಪದ ಗ್ರಾಮವೊಂದರ ರಫೀಕ್ ( 38) ಎಂದು ಗುರುತಿಸಲಾಗಿದೆಆನಂದಪುರ ಸಮೀಪದ ನೆದರವಳ್ಳಿ ಬಳಿ ರಸ್ತೆ ಬದಿಯಲ್ಲಿ ಶವ ಪತ್ತೆಯಾಗಿದೆ.
ಜಮೀನು ವಿಚಾರವಾಗಿ ಸಂಬಂಧಿಕರ ನಡುವೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿದೆ.ಗುರುವಾರ ಸಂಜೆ ರಫೀಕ್ ನನ್ನು ಆತನ ಕಾರ್ ನಲ್ಲಿ ಸೊರಬದಿಂದ ಸಾಗರ ಹೊರವಲಯದ ಐಗಿನಬೈಲು ಬಳಿ ಕರೆದುಕೊಂಡು ಬರಲಾಗಿದ್ದು, ಆತನನ್ನು ಕೆಳಗೆ ತಳ್ಳಿ ತಲೆ ಮೇಲೆ ಕಾರ್ ಹತ್ತಿಸಿ ಹತ್ಯೆ ಮಾಡಲಾಗಿದೆ ಇಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ
ಸ್ಥಳಕ್ಕೆ ಆನಂದಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply