ಶಿವಮೊಗ್ಗದಲ್ಲಿ ಮಿಸ್ಟರ್, ಮಿಸ್ ಮತ್ತು ಮಿಸ್ಸಸ್ ಕರ್ನಾಟಕ 2024ರ ಬ್ಯೂಟಿ ಪೇಜೆಂಟ್ನ ಗ್ರಾಂಡ್ ಫಿನಾಲೆ ಯಶಸ್ವಿ
ಶಿವಮೊಗ್ಗ : ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಮಿಸ್ಟರ್, ಮಿಸ್ ಮತ್ತು ಮಿಸ್ಸಸ್ ಕರ್ನಾಟಕ 2024ರ ಬ್ಯೂಟಿ ಪೇಜೆಂಟ್ನ ಗ್ರಾಂಡ್ ಫಿನಾಲೆಯಲ್ಲಿ ವಿವಿಧ ವಿಭಾಗದಲ್ಲಿ ಸ್ಪರ್ದಿಗಳು ವಿಜೇತರಾಗಿದ್ದಾರೆ.
ರೇವ ಇವೆಂಟ್ಸ್ ಆಶ್ರಯದಲ್ಲಿ ಈ ಸ್ಪರ್ಧೆ ನಡೆದಿದ್ದು ಮಿಸ್ಟರ್ ವಿಭಾಗದಲ್ಲಿ ಭರತ್ ಕುಮಾರ್ ಪ್ರಥಮ ಸ್ಥಾನವನ್ನು ಪಡೆದಿದ್ದು, ಮಿಸ್ಟರ್ ಕರ್ನಾಟಕ ಟೈಟಲ್ ಅನ್ನು ಪಡೆದುಕೊಂಡಿರುತ್ತಾರೆ.
ಮಿಸ್ ವಿಭಾಗದಲ್ಲಿ ಚೈತನ್ಯ ಶಶಿ,ಮಿಸ್ ಕರ್ನಾಟಕ ಟೈಟಲ್ ಪಡೆದಿರುತ್ತಾರೆ. ಮಿಸ್ಸಸ್ ವಿಭಾಗದಲ್ಲಿ ಶ್ರೀಮತಿ ಸ್ಮೃತಿ ಹೆಗಡೆಯವರು ಮಿಸ್ಸಸ್ ಕರ್ನಾಟಕ ಟೈಟಲ್ ಪಡೆಯುವ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತಾರೆ.
ರೇವಾ ಇವೆಂಟ್ ನ ಸಂಸ್ಥಾಪಕರಾದ ಶ್ರೀ ರೋಹನ್ ರೇವಣ್ಕರ್ರವರು ವಿಜೇತರಿಗೆ ಅಭಿನಂದಿಸಿದ್ದಾರೆ,ರೇವಾ ಇವೆಂಟ್ಸ್ ಈಗಾಗಲೇ 3 ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಂತಹ ಕೀರ್ತಿ ಇವರಿಗೆ ಸಲ್ಲುತ್ತದೆ.
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಹೆಚ್.ಸಿ. ಯೋಗೇಶ್, ಶ್ರೀಯುತ ಮಧುಸೂಧನ ಐತಾಳ್, ಶ್ರೀ ವಿ. ಮಂಜುನಾಥ, ಶ್ರೀಮತಿ ಲಕ್ಷ್ಮೀ ಶಂಕರನಾಯಕ್ ಉಪಸ್ಥಿತರಿದ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply