ಗೀತಾ ಸಂಸದೆಯಾಗಲಿ ಎಂಬ ಆಸೆ ಇದೆ ! ರಾಜಕೀಯದ ಕುರಿತು ಶಿವಮೊಗ್ಗದಲ್ಲಿ ಡಾ. ಶಿವರಾಜ್ ಕುಮಾರ್ ಮಾತು !
ಶಿವಮೊಗ್ಗ : ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಶಿವಮೊಗ್ಗದಲ್ಲಿ ರಾಜಕೀಯದ ಕುರಿತು ಮಾತನಾಡಿದ್ದಾರೆ. ನಾನು ರಾಜಕೀಯಕ್ಕೆ ಬರುವುದಿಲ್ಲ. ಪತ್ನಿ ಗೀತಾ ಶಿವರಾಜ್ ಕುಮಾರ್ ಸಂಸದರಾಗಲಿ ಎಂಬ ಆಸೆ ಇದೆ. ಈ ಮೂಲಕ ಮಹಿಳೆಯರಿಗೆ ಮಾದರಿಯಾಗಲಿ. ಒಬ್ಬ ಪತಿಯಾಗಿ ನಾನು ಗೀತಾಳನ್ನು ಸಪೋರ್ಟ್ ಮಾಡುತ್ತೇನೆ. ಎಂದು ನಟ ಶಿವರಾಜ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಇಂದು ನಗರದ ಕಲ್ಲಹಳ್ಳಿಯಲ್ಲಿರುವ ಸಚಿವ ಮಧು ಬಂಗಾರಪ್ಪ ನವರ ಸ್ವಗೃಹದಲ್ಲಿ ನಡೆದ ಸಚಿವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಕಾಂಗ್ರೆಸ್ ಪಕ್ಷ ಟಿಕೇಟ್ ಕೊಟ್ಟರೆ ಗೀತಾಳನ್ನ ಎಂಪಿ ಆಗಿ ನೋಡುವ ಆಸೆ ಇದೆ.
ಶಿವಮೊಗ್ಗದಲ್ಲಿ ಗೀತಾ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಪ್ರಚಾರದ ಕಡೆಗೆ ಗಮನ ಹರಿಸಿಲ್ಲ. ಕೆಲಸಗಳ ಬಗ್ಗೆ ಜನರೊಂದಿಗೆ ಇದ್ದರೆ ಸಾಕು ಎಂದು ಶಿವರಾಜ್ಕುಮಾರ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ನಾನು ರಾಜಕೀಯಕ್ಕೆ ಬರೊಲ್ಲ. ಅದರ ಬಗ್ಗೆ ಆಸಕ್ತಿ ಇಲ್ಲ. ಜನರ ಸೇವೆ ಮಾಡೋಕೆ ರಾಜಕೀಯದಲ್ಲಿದ್ದುಕೊಂಡು ಸೇವೆ ಮಾಡೋದು ಗೊತ್ತಿಲ್ಲ. ಜನ ಕಷ್ಟ ಅಂತ ಬಂದರೆ ಹಣಕೊಟ್ಟು ಕಳುಹಿಸುವೆ. ಆದರೆ ರಾಜಕಾರಣಗೊತ್ತಿಲ್ಲ. ಆದರೆ ಗೀತ ಅದೇ ಕುಟುಂಬದಿಂದ ಬಂದವಳು ರಾಜಕೀಯ ರಕ್ತದಲ್ಲಿ ಬಂದಿದೆ. ಎಂಪಿ ಆಗಿ ಆಯ್ಕೆಯಾದರೆ ಸಂತೋಷ ಎಂದು ಹೇಳಿದರು
ಇದೇ ಸಂದರ್ಭ ಮಾತನಾಡಿದ ಗೀತಾ ಶಿವರಾಜ್ಕುಮಾರ್ ರಾಜಕೀಯ ಕ್ಷೇತ್ರವನ್ನು ಸೇವಾ ಕ್ಷೇತ್ರವಾಗಿ ಪರಿಗಣಿಸಿದ್ದೇನೆ. ಜಿಲ್ಲೆಯಲ್ಲಿ ನಾನು ಓಡಾಡುತ್ತಿದ್ದೇನೆ, ಶಿವಮೊಗ್ಗದಲ್ಲಿ ಸ್ಪರ್ಧೆ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವಕಾಶ ಸಿಕ್ಕರೆ ಸ್ಪರ್ಧೆ ಮಾಡುತ್ತೇನೆ. ಬಂಗಾರಧಾಮದ ಮೂಲಕ ಈಗಾಗಲೇ ಸಾಮಾಜಿಕ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply