ನಕ್ಸಲ್ ಹೋರಾಟದ ಕೇಸ್ ಗಳ ತನಿಖೆ ಶಿವಮೊಗ್ಗದಲ್ಲಿ ಮತ್ತಷ್ಟು ಚುರುಕು ! ನಕ್ಸಲ್ ಶ್ರೀಮತಿ ಕೋರ್ಟ್ ಗೆ ಹಾಜರ್ !
ಶಿವಮೊಗ್ಗ : ನಕ್ಸಲ್ ಹೋರಾಟದ ಕೇಸ್ ಗಳ ತನಿಖೆ ಶಿವಮೊಗ್ಗದಲ್ಲಿ ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಇತ್ತೀಚೆಗಷ್ಟೇ ನಕ್ಸಲ್ ನಾಯಕ ಬಿ. ಜಿ ಕೃಷ್ಣಮೂರ್ತಿ ಯನ್ನು ಶಿವಮೊಗ್ಗದ ಕೋರ್ಟ್ ನಲ್ಲಿ ಹಾಜರುಪಡಿಸಲಾಗಿತ್ತು. ಇದರ ಬೆನ್ನಲ್ಲೇ ಈಗ ನಕ್ಸಲ್ ಹೋರಾಟಗಾರ್ತಿ ಶೃಂಗೇರಿಯ ಶ್ರೀಮತಿಯನ್ನು ತೀರ್ಥಹಳ್ಳಿ ಕೋರ್ಟಿಗೆ ಹಾಜರು ಪಡಿಸಲಾಗಿದೆ
ನಕ್ಸಲ್ ಹೋರಾಟಗಳಲ್ಲಿ ಬಿ.ಜಿ ಕೃಷ್ಣಮೂರ್ತಿಯ ಜೊತೆಗೆ ಹಲವು ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ನಕ್ಸಲ್ ಶೃಂಗೇರಿಯ ಶ್ರೀಮತಿಯನ್ನು ಆಗುಂಬೆ ಠಾಣೆ ಕೇಸ್ ಸಂಬಂಧ ನಕ್ಸಲ್ ಶ್ರೀಮತಿಯನ್ನು ಬಾಡಿ ವಾರೆಂಟ್ ಮೇಲೆ ಕರತರಲಾಗಿದ್ದು ಇಂದು ಬೆಳಿಗ್ಗೆ 10.30 ಕ್ಕೆ ತೀರ್ಥಹಳ್ಳಿ ಜೆಎಂಎಫ್ ಸಿ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ.
ನಕ್ಸಲ್ ಹೋರಾಟಗಾರ್ತಿ ಶೃಂಗೇರಿಯ ಶ್ರೀಮತಿಯನ್ನು ನವೆಂಬರ್ 7.2023 ರಂದು ಕೇರಳ ಪೊಲೀಸರು ಅರೆಸ್ಟ್ ಮಾಡಿದ್ದರು, ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಈಕೆಯ ಮೇಲೆ ಹಲವು ಕೇಸ್ ಗಳಿದ್ದು ಹೈ ಸೆಕ್ಯೂರಿಟಿ ಮೂಲಕ ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ಶಿವಮೊಗ್ಗಕ್ಕೆ ಕರೆತಂದು ಈಗ ತೀರ್ಥಹಳ್ಳಿ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.
ನಕ್ಸಲ್ ಪ್ರಕರಣದ ಆರೋಪಿಯಾಗಿರುವ ಶ್ರೀಮತಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ತಾರಳ್ಳಿಕೊಡಿಗೆ ಗ್ರಾಮದವರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply