ವಿದ್ಯಾನಗರ ಮಲ್ಸೇತುವೆ ತಡೆಗೋಡೆಗೆ ಲಾರಿ ಡಿಕ್ಕಿ ! ಉದ್ಘಾಟನೆಯಾದ ಹತ್ತೇ ದಿನಕ್ಕೆ ನಡೆಯಿತು ಅಪಘಾತ !
ಶಿವಮೊಗ್ಗ : ಕೆಲ ದಿನಗಳ ಹಿಂದೆ ಅಷ್ಟೇ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿದ್ಯಾನಗರದ ವೃತ್ತಾಕಾರ ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಮಾಡಲಾಗಿತ್ತು.
ಉದ್ಘಾಟನೆಯಾದ ಹತ್ತು ದಿನದಲ್ಲಿ ಈಗ ವಿದ್ಯಾನಗರ ಮೇಲ್ ಸೇತುವೆಯ ಮೇಲೆ ಮೊದಲ ಅಪಘಾತ ಸಂಭವಿಸಿದೆ. ಲಾರಿಯೊಂದು ತಡೆಗೋಡೆಗೆ ಡಿಕ್ಕಿ ಹೊಡೆದಿದೆ.
ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಸೇರಲು ಫೋಟೋ ಮೇಲೆ ಕ್ಲಿಕ್ ಮಾಡಿ
ಹೊಳೆ ಹೊನ್ನೂರು ಕಡೆಯಿಂದ ಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮೇಲ್ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.ಇದರ ರಭಸಕ್ಕೆ ಲಾರಿ ಮುಂಭಾಗ ಜಖಂಗೊಂಡಿದೆ. ಅತಿಯಾದ ವೇಗ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದ್ದು.
ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply