‘ಶಿವಮೊಗ್ಗ’ದಲ್ಲೇ ಮನೆ ಮಾಡಿದ್ದೀನಿ, ಅಲ್ಲೇ ಇರ್ತೀನಿ: ‘ಗೆಲ್ಲುವ ಭರವಸೆ’ ಇದೆ- ಗೀತಾ ಶಿವರಾಜ್ ಕುಮಾರ್

‘ಶಿವಮೊಗ್ಗ’ದಲ್ಲೇ ಮನೆ ಮಾಡಿದ್ದೀನಿ, ಅಲ್ಲೇ ಇರ್ತೀನಿ: ‘ಗೆಲ್ಲುವ ಭರವಸೆ’ ಇದೆ- ಗೀತಾ ಶಿವರಾಜ್ ಕುಮಾರ್

ಶಿವಮೊಗ್ಗ : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ನನಗೆ ಟಿಕೆಟ್ ನೀಡಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲೋ ಭರವಸೆಯಿದೆ. ಇಲ್ಲೇ ಮನೆ ಮಾಡಿದ್ದೀನಿ. ಓಡಾಟಕ್ಕೆ ಏನೂ ತೊಂದರೆ ಇಲ್ಲ. ಶಿವಮೊಗ್ಗದಲ್ಲಿ ಎಲ್ಲರೂ ಪರಿಚಿತರೇ ಇದ್ದಾರೆ. ಹೊಸಬರು ಯಾರಿಲ್ಲ.ನೂರಕ್ಕೆ ನೂರರಷ್ಟು ಶಿವಮೊಗ್ಗದಲ್ಲಿ ಗೆಲ್ಲುತ್ತೇನೆ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ.ಎಂಬುದಾಗಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್​​ ಪಕ್ಷದಿಂದ ಟಿಕೆಟ್ ಪಡೆದ ಹಾಗೂ ಸಿದ್ಧತೆಗಳ ಬಗ್ಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಎಲ್ಲರೂ ಪರಿಚಿತರೇ ಇದ್ದಾರೆ. ಹೊಸಬರು ಯಾರಿಲ್ಲ.ನೂರಕ್ಕೆ ನೂರರಷ್ಟು ಶಿವಮೊಗ್ಗದಲ್ಲಿ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಸೇರಲು ಫೋಟೋ ಮೇಲೆ ಕ್ಲಿಕ್ ಮಾಡಿ

 

ನಾನು 17 ದಿನ ಕೆಲಸ ಮಾಡಿದ್ದೆ. ಹೀಗಾಗಿ ಸೋಲಾಗಿತ್ತು ಅನಿಸುತ್ತದೆ. ಈ ಬಾರಿ ಹೆಚ್ಚಿನ ಸಮಯ ಶಿವಮೊಗ್ಗದಲ್ಲಿ ಇರುತ್ತೇನೆ. ನನ್ನ ಸಹೋದರ ಸಹ ಬೆಂಬಲವಾಗಿ ಇದ್ದಾನೆ. ಶಿವಮೊಗ್ಗದಲ್ಲಿ ಈಗಾಗಲೇ ಮನೆ ಮಾಡಿದ್ದೇನೆ. ಓಡಾಟಕ್ಕೆ ಸಮಸ್ಯೆ ಇಲ್ಲ. ಚುನಾವಣೆಯಲ್ಲಿ ಯಾರು ಭಾಗಿ ಆಗುತ್ತಾರೆ ಎಂದು ಇನ್ನೂ ಪ್ಲಾನ್ ಮಾಡಿಲ್ಲ, ಶಿವಣ್ಣ ಬರುವುದು ಖಚಿತ ಎಂದರು.

ಪತ್ನಿ ಗೀತಾಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿರುವ ಬಗ್ಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ಗೀತಾಗೆ ರಾಜಕೀಯ ಎಷ್ಟು ಮುಖ್ಯವೋ ನನಗೆ ಸಿನಿಮಾ ಅಷ್ಟೇ ಮುಖ್ಯ. ನನ್ನ ಬೆಂಬಲ ಖಂಡಿತ ಇರುತ್ತದೆ. ಇದು ಚುನಾವಣೆ ಮಾತ್ರ, ನಾನು ಗೆಲ್ಲುತ್ತೇನೆ ಎಂಬ ಭರವಸೆ ಇರಲೇಬೇಕು ಎಂದರು

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.