BIG BREAKING NEWS  : ಸ್ವತಂತ್ರ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ  ಸ್ಪರ್ಧೆ ! ರಾಷ್ಟ್ರ ಭಕ್ತರ ಬಳಗದ ಎದುರು ಘೋಷಣೆ !

BIG BREAKING NEWS : ಸ್ವತಂತ್ರ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸ್ಪರ್ಧೆ ! ರಾಷ್ಟ್ರ ಭಕ್ತರ ಬಳಗದ ಎದುರು ಘೋಷಣೆ !

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದು ಇಂದು ನಡೆದ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ರಾಷ್ಟ್ರಭಕ್ತರ ಬಳಗದ ಎದುರು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಇಂದು ಬಾಲರಾಜ್ ಅರಸ್ ರಸ್ತೆಯಲ್ಲಿರುವ ಬಂಜಾರ ಕನ್ವೆನ್ಷನ್ ಹಾಲ್ನಲ್ಲಿ ನಡೆದ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹಲವು ಬೆಂಬಲಿಗರ ಜಾತಿಯ ಮುಖಂಡರುಗಳ ಹಾಗೂ ಹಿರಿಯರ ಮಾತುಗಳನ್ನ ಆಲಿಸಿದ ಈಶ್ವರಪ್ಪ

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಸೇರಲು ಫೋಟೋ ಮೇಲೆ ಕ್ಲಿಕ್ ಮಾಡಿ

 ಬೆಂಬಲಿಗರ ಎದುರು ಮನಸ್ಸು ಬಿಚ್ಚಿ ಮಾತನಾಡುತ್ತಿದ್ದೇನೆ. ನಾನು ವೈಯಕ್ತಿಕ ರಾಜಕೀಯಕ್ಕಾಗಿ ಇಲ್ಲಿ ಮಾತನಾಡುತ್ತಿಲ್ಲ, ನನ್ನ ಪ್ರಾಣ ಹೋದರೂ ನರೇಂದ್ರ ಮೋದಿಯ ವಿರುದ್ಧ ಹೋಗಿಲ್ಲ ಹೋಗೋದು ಇಲ್ಲ, ನನ್ನ ಮನಸ್ಸಲ್ಲಿ ಒಂದು ಕಡೆ ರಾಮ ಇದ್ದಾನೆ ಇನ್ನೊಂದು ಕಡೆ ನರೇಂದ್ರ ಮೋದಿಯವರಿದ್ದಾರೆ ಆದರೆ ಯಡಿಯೂರಪ್ಪನವರ ಮನಸ್ಸಲ್ಲಿ ಅವರ ಇಬ್ಬರು ಮಕ್ಕಳಿದ್ದಾರೆ, ಒಂದು ವಂಶದ ಕೈಯಲ್ಲಿ ಪಕ್ಷ ಇದೆ, ಇದನ್ನೆಲ್ಲಾ ನಾನು ಸುಮ್ಮನೆ ನೋಡಿಕೊಂಡು ಕೂರಬೇಕಾ ? ಪಕ್ಷವನ್ನ ತಾಯಿ ಎಂದುಕೊಂಡಿದ್ದೇನೆ, ತಾಯಿಯ ಕತ್ತು ಹಿಸುಕಿದಾಗ ಸುಮ್ಮನೆ ಕೂರಬೇಕಾ ಎಂದು ಯಡಿಯೂರಪ್ಪ  ಕುಟುಂಬದ ವಿರುದ್ಧ  ಆಕ್ರೋಶ ಹೊರ ಹಾಕಿದ್ದಾರೆ 

ಹಿಂದುತ್ವದ ಪ್ರತಿಪ್ರಾದನೆ ಮಾಡುವ ನಿಟ್ಟಿನಲ್ಲಿ, ಕೇಂದ್ರದ ನಾಯಕರ ಗಮನ ಸೆಳೆಯುವ ನಿಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 

 


Leave a Reply

Your email address will not be published.