ನಾಳೆ ಶಿವಮೊಗ್ಗದಲ್ಲಿ ಜೀ ಕನ್ನಡ ವಾಹಿನಿಯ ಮಹಾ ಆಡಿಷನ್ !
ಶಿವಮೊಗ್ಗ : ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಿಗಾಗಿ ನಡೆಯಲಿದೆ ಮಹಾ ಆಡಿಶನ್.
ಜೀ ಕನ್ನಡ ವಾಹಿನಿಯು, ಈಗ ತನ್ನ ಹಿಟ್ ರಿಯಾಲಿಟಿ ಶೋಗಳಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳನ್ನ ಮತ್ತೆ ತೆರೆಗೆ ತರಲು ತಯಾರಿ ನಡೆಸಿದೆ.
ಇದೇ ಮಾರ್ಚ್ 17 ರಂದು ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ವೀರಶೈವ ಕಲ್ಯಾಣ ಮಂದಿರ ರಸ್ತೆಯ ಹಳೆ ತಾಲೂಕು ಕಛೇರಿ ಎದುರಿನ ಬಸವೇಶ್ವರ ವಿದ್ಯಾಸಂಸ್ಥೆ ಆವರಣದಲ್ಲಿ ಮೆಗಾ ಆಡಿಷನ್ ನಡೆಯಲಿದೆ.
ಆಡಿಷನಲ್ಲಿ ಭಾಗವಹಿಸಲು ಇಚ್ಚಿಸುವವರು ಅಡ್ರಸ್ ಪ್ರೊಪ್ ಜೆರಾಕ್ಸ್ ಜೊತೆ ಎರಡು ಪಾಸ್ ಪೋರ್ಟ್ ಸೈಜ್ ಪೋಟೊದೊಂದಿಗೆ ಆಡಿಷನ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದ್ದು, ಜೀ ಕನ್ನಡ ವಾಹಿನಿಯು ಈ ಆಡಿಷನ್‌ಗೆ ಯಾವುದೇ ಶುಲ್ಕು ವಿಧಿಸಿರುವುದಿಲ್ಲವೆಂದು ಸ್ಪಷ್ಟ ಪಡಿಸಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply