ಕೇಸರಿಮಯವಾಗಿದ್ದ ಶಿವಮೊಗ್ಗ ನಗರ ರಾತ್ರೋ ರಾತ್ರಿ ಖಾಲಿ ಖಾಲಿ ! ಬಿಜೆಪಿಯ ಫ್ಲೆಕ್ಸ್, ಧ್ವಜಗಳು ತೆರವು !
ಶಿವಮೊಗ್ಗ : ಮಾ.18ರಂದು ಅಂದರೆ ನಾಳೆ ಸೋಮವಾರದಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಶನಿವಾರ ಬೆಳಗ್ಗೆ ಕೇಸರಿಮಯ ಆಗಿದ್ದ ನಗರ ರಾತ್ರಿ ವೇಳೆಯೇ ಖಾಲಿ, ಖಾಲಿ ಎಂಬಂತಾಗಿತ್ತು. ನೀತಿ ಸಂಹಿತೆ ಜಾರಿಯಾದ ಬಳಿಕ ಚುನಾವಣೆ ಅಧಿಕಾರಿಗಳ ಸೂಚನೆಯಂತೆ ಎಲ್ಲ ಫೆಕ್ಸ್ಗಳನ್ನು ತೆರವುಗೊಳಿಸಲಾಗಿದೆ.
ಶಿವಮೊಗ್ಗ ವಿಮಾನನಿಲ್ದಾಣದಿಂದ ಅಲ್ಲಮಪ್ರಭು ಮೈದಾನದವರೆಗೆ ( ಫ್ರೀಡಂ ಪಾರ್ಕ್ ) ರಸ್ತೆಯಲ್ಲಿ ಬಿಜೆಪಿ ಧ್ವಜಗಳನ್ನು ಹಾಕಲಾಗಿತ್ತು. ಪ್ರಮುಖ ವೃತ್ತಗಳನ್ನು ಅಲಂಕರಿಸಲಾಗಿತ್ತು . ಪ್ರಧಾನಿ ಮೋದಿ ಮತ್ತು ರಾಘವೇಂದ್ರ ಭಾವಚಿತ್ರಗಳಿರುವ ಅಲಂಕೃತಪ್ಲೆಕ್ಸ್ಗಳನ್ನು ಪ್ರಮುಖ ವೃತ್ತ ಗಳಲ್ಲಿ, ಅಳವಡಿಸಲಾಗಿತ್ತು. ಎಲ್ಲಾ ಬ್ಯಾನರ್ ಫ್ಲೆಕ್ಸ್, ಮತ್ತು ಬಿಜೆಪಿಯ ಧ್ವಜಗಳನ್ನು ಚುನಾವಣೆ ಅಧಿಕಾರಿಗಳ ಸೂಚನೆಯಂತೆ ತೆರವುಗೊಳಿಸಲಾಗಿದೆ.
ಇನ್ನು ಪ್ರಧಾನಿ ಭೇಟಿ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚ ಲಾಗಿದೆ. ಬಿ.ಎಚ್. ರಸ್ತೆಯಲ್ಲಿ ಡಾಂಬರೀಕರಣ, ರಸ್ತೆ ಇಕ್ಕೆಲಗಳಲ್ಲಿ ಇದ್ದ ಕಸ, ಮಣ್ಣು ತೆರವು ಮಾಡಲಾಗಿದೆ. ಕಳೆದ ಎರಡು ದಿನದಿಂದ ಪೌರ ಕಾರ್ಮಿಕರು ನಿರಂತರವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಸಹ್ಯಾದ್ರಿ ಕಾಲೇಜು ಮುಂಭಾಗ ಇದ್ದ ಹಂಪ್ಗಳನ್ನು ತೆರವು ಮಾಡಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply