ಮೋದಿ ಸಮಾವೇಶಕ್ಕೆ ಈಶ್ವರಪ್ಪ ಗೈರು ! ಕುಮಾರ್ ಬಂಗಾರಪ್ಪ ಧಿಡೀರ್ ಪ್ರತ್ಯಕ್ಷ !

ಮೋದಿ ಸಮಾವೇಶಕ್ಕೆ ಈಶ್ವರಪ್ಪ ಗೈರು ! ಕುಮಾರ್ ಬಂಗಾರಪ್ಪ ಧಿಡೀರ್ ಪ್ರತ್ಯಕ್ಷ !

ಶಿವಮೊಗ್ಗ : ಇಂದು ಶಿವಮೊಗ್ಗದ ಅಲ್ಲಮಹಾಪ್ರಭು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬೃಹತ್ ಬಹಿರಂಗ ಸಭೆಯನ್ನ ಆಯೋಜಿಸಲಾಗಿತ್ತು, ಸಭೆಯಲ್ಲಿ ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರು ಹಾಗೂ ಹಲವು ಬಿಜೆಪಿ ಮುಖಂಡರು ಉಪಸ್ಥಿತಿ ಇದ್ದು, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮಾತ್ರ ಮೋದಿ ಕಾರ್ಯಕ್ರದಲ್ಲಿ ಕಾಣಿಸಲಿಲ್ಲ.

ಅದೆಷ್ಟೋ ಬಿಜೆಪಿ ಕಾರ್ಯಕರ್ತರು ಈಶ್ವರಪ್ಪನವರು ಮನಸ್ಸು ಬದಲಾಯಿಸುತ್ತಾರೆ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ ಎಂಬ ಅಪೇಕ್ಷೆಯನ್ನು ಇಟ್ಟುಕೊಂಡಿದ್ದರು, ಆದರೂ ಈಶ್ವರಪ್ಪ ಮಾತ್ರ ಕಾರ್ಯಕ್ರಮಕ್ಕೆ ಬರಲಿಲ್ಲ, ಇನ್ನು ಅವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮೋದಿ ಕಾರ್ಯಕ್ರಮಕ್ಕೆ ಬರಲ್ಲ ಎಂದು ಹೇಳಿದ್ದ ಕಾರಣ. ನಿರೀಕ್ಷೆಯಂತೆ ಈಶ್ವರಪ್ಪನವರು ಇಂದು ಮೋದಿ ಕಾರ್ಯಕ್ರಮಕ್ಕೆ ಗೈರು ಆಗಿದ್ದರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

 ಭಾನುವಾರ ಸಾಲು ಸಾಲು ಬಿಜೆಪಿ ನಾಯಕರು ಈಶ್ವರಪ್ಪ ನಿವಾಸಕ್ಕೆ ತೆರಳಿ, ಮಾಜಿ ಸಚಿವರ ಮನವೊಲಿಸಲು ಪ್ರಯತ್ನ ಪಟ್ಟಲು ಮನವೊಲಿಸಲು ಸಾಧ್ಯವಾಗದೆ ಹಿಂತಿರುಗಿದ್ದರು, ನಂತರ ಸೆಂಟ್ರಲ್ ಟೀಮ್ ಕೂಡ ಈಶ್ವರಪ್ಪ ನಿವಾಸಕ್ಕೆ ಎಂಟ್ರಿ ಕೊಟ್ಟಿತ್ತು, ಮಾಜಿ ಸಚಿವರನ್ನ ಮನವೊಲಿಸಲು ಬಿಜೆಪಿ ಶತ ಪ್ರಯತ್ನ ಪಟ್ಟರು ,ಹಲವು ಭಾರೀ ಸಂಧಾನ ವಿಫಲವಾಗಿತ್ತು, ಯಾರ ಮಾತನ್ನು ಕೇಳದ ಕೆ ಎಸ್ ಈಶ್ವರಪ್ಪ, ಪಕ್ಷ ಒಂದು ಕುಟುಂಬದ ಕೈಯಲ್ಲಿದೆ, ಪಕ್ಷ ಶುದ್ದಿಕರಣವಾಗಬೇಕು ಹಾಗಾಗಿ ಪಕ್ಷೇತರವಾಗಿ ಸ್ಪರ್ಧೆ ಮಾಡೇ ತಿರುತ್ತೇನೆ, ಶಿವಮೊಗ್ಗ ಕ್ಷೇತ್ರವನ್ನ ಗೆದ್ದ ನಂತರ ಮೋದಿಯ ಬಳಿ ಹೋಗುತ್ತೇನೆ ಎಂದು ಕಡ್ಡಿ ಮುರಿದ ಹಾಗೆ ಹೇಳಿದ್ದರು, ಹಾಗೆಯೇ ಇಂದಿನ ಮೋದಿ ಕಾರ್ಯಕ್ರಮಕ್ಕೆ ಗೈರಾಗಿದ್ದು ಎಲ್ಲರ ಗಮನ ಸೆಳೆಯಿತು.

ಕುಮಾರ್ ಬಂಗಾರಪ್ಪ ಧಿಡೀರ್ ಪ್ರತ್ಯಕ್ಷ !

 ಇನ್ನೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬ ವಿಧಾನಸಭಾ ಕ್ಷೇತ್ರದಿಂದ ಸೋಲನ್ನ ಅನುಭವಿಸಿದ್ದ , ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪನವರ ಪುತ್ರ ಕುಮಾರ್ ಬಂಗಾರಪ್ಪನವರು ಕಳೆದ ಹತ್ತು ತಿಂಗಳಿನಿಂದ ಸಾಲು ಸಾಲು ಬಿಜೆಪಿ ಕಾರ್ಯಕ್ರಮಗಳಲ್ಲಿ ಗೈರಾಗಿದ್ದರು, ಯಾವುದೇ ಬಿಜೆಪಿ ಕಾರ್ಯಕ್ರಮಗಳಲ್ಲಿ ಕಾಣುತ್ತಿರಲಿಲ್ಲ, ಪಕ್ಷ ಮತ್ತು ರಾಜಕಾರಣದಿಂದಲೂ ಕೂಡ ಅಂತರ ಕಾಯ್ದುಕೊಂಡಿದ್ದರು, 10 ತಿಂಗಳ ಕಾಲ ಪಕ್ಷದಿಂದ ದೂರ ಉಳಿದಿದ್ದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಇಂದು ಪ್ರಧಾನಿ ನರೇಂದ್ರ ಮೋದಿಯ ಬೃಹತ್ ಬಹಿರಂಗ ಸಭೆಯಲ್ಲಿ ದಿಡೀರ್ ಪ್ರತ್ಯಕ್ಷವಾಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು 

ಕುಮಾರ್ ಬಂಗಾರಪ್ಪ ಬರುತ್ತಿದ್ದಂತೆಯೇ ನೆರೆದವರು ಚಪ್ಪಾಳೆ, ಶಿಳ್ಳೆ, ಕೇಕೆ ಹಾಕಿ ಸ್ವಾಗತಿಸಿದರು.ಮಾಜಿ ಶಾಸಕರಿಗೆ ಮೀಸಲಿದ್ದ ಎರಡನೇ ಸಾಲಿನಲ್ಲಿ ಕುಳಿತ ಕುಮಾರ್ ಬಂಗಾರಪ್ಪ ಅವರನ್ನು ಸಂಸದ ಬಿ.ವೈ.ರಾಘವೇಂದ್ರ ಕರೆತಂದು ಮುಂದಿನ ಸಾಲಿನಲ್ಲಿ ಕೂರಿಸಿದರು.

ಕುಮಾರ್ ಬಂಗಾರಪ್ಪ ಬಿಜೆಪಿಯನ್ನು ತೊರೆಯಲಿದ್ದಾರೆ, ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ಇಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ತೆರೆ ಎಳೆದಿದ್ದಾರೆ.ಕುಮಾರ್ ಅವರನ್ನು ಉತ್ತರ ಕನ್ನಡದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುತ್ತಿದೆ ಎಂಬ ಚರ್ಚೆ ಜಿಲ್ಲೆಯಲ್ಲಿ ಜೋರಾಗಿಯೇ ನಡೆಯುತ್ತಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.