ಮರ್ಡರ್ ಅಟ್ಯಾಕ್ ಕೇಸ್ ! 6 ಜನ ಅರೆಸ್ಟ್ !
ಶಿವಮೊಗ್ಗ : ಮಾರ್ಚ್ 17 ಭಾನುವಾರ ರಾತ್ರಿ ಶಿವಮೊಗ್ಗ ಭದ್ರಾವತಿಯ ಹೈವೇ ಬಳಿ ಇರುವ ಹರಿಗೆ ಗ್ರಾಮದ ಬಳಿ ನಡೆದ ಗಲಾಟೆಯ ಪ್ರಕರಣದ ಸಂಬಂಧ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯ ಪತ್ನಿ ನೀಡಿದ ದೂರು ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ
ಏನಿದು ಘಟನೆ ?
ಪ್ರಶಾಂತ್ (40) ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದಾನೆ. ಶಿವಮೊಗ್ಗ ತಾಲೂಕಿನ ವಡ್ಡಿನಕೊಪ್ಪ ನಿವಾಸಿ. ಆ ದಿನ ರಾತ್ರಿ ತನ್ನ ಜೊತೆ ಕೆಲಸ ಮಾಡುವ ಯುವಕರ ಜೊತೆ ಊಟ ಮಾಡುತ್ತಿದ್ದರು. ಈ ನಡುವೆ ಪ್ರಶಾಂತ್ ಮತ್ತು ಆತನ ಬಳಿ ಬಾರ್ ಬೆಂಡಿಂಗ್ ಕೆಲಸದ ಯುವಕರಾದ ದರ್ಶನ ಮತ್ತು ಅಮಿತ್ ಸೇರಿದಂತೆ ನಾಲ್ವರ ಜೊತೆ ಗಲಾಟೆ ಆಗಿದೆ.
ಪ್ರಶಾಂತ್ ಇವರಿಗೆ ಬಾರ್ ಬೆಂಡಿಂಗ್ ಕೆಲಸ ಕಲಿಸಿಕೊಟ್ಟು, ಜೊತೆಗೆ ಕೆಲಸವನ್ನೂ ಕೊಟ್ಟಿದ್ದನು. ರಾತ್ರಿ ಎಣ್ಣೆ ಹೊಡೆದಿದ್ದ ಕೆಲಸ ಮಾಡುವ ಯುವಕರು ಮತ್ತು ಕೆಲಸ ಕೊಟ್ಟ ಪ್ರಶಾಂತ್ ನಡುವೆ ಮಾತಿನ ಚಕಮಕಿ ಆಗಿದೆ. ಪ್ರಶಾಂತ್ ಒಂದಿಷ್ಟು ಯುವಕರನ್ನು ಗದರಿಸಿದ್ದಾನೆ.
ನಂತರ ತೊಪ್ಪಿನಘಟ್ಟ ಕ್ರಾಸ್ ಬಳಿ ಊಟ ಮಾಡಿ ಕೈತೊಳೆಯುವಾಗ ಹಿಂದಿನಿಂದ ಬಂದ 6 ಜನ ಯುವಕರು ಪ್ರಶಾಂತ್ ನ ನೆತ್ತಿಯ ಮೇಲೆ ಲಾಂಗು ಬೀಸಿದ್ದಾರೆ. ಬೀಸಿದ ಲಾಂಗು ಪ್ರಶಾಂತನ ತಲೆ ಬುರುಡೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಹಾಗೆ ಮೆಗ್ಗಾನ್ ಗೆ ಕರೆತರಲಾಗಿತ್ತು. ಮೆಗ್ಗಾನ್ ನಿಂದ ಖಾಸಗಿ ಆಸ್ಪತ್ರೆಯಲ್ಲಿ ಪ್ರಶಾಂತ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ದರ್ಶನ್, ಪವನ್ ಅಮಿತ್ ಮತ್ತು ಇತರರ ವಿರುದ್ಧ ಪ್ರಶಾಂತ್ ಪತ್ನಿ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ವಿದ್ಯಾನಗರದ ಆಶೋಕ್, ತೇಜಸ್, ಪವನ್, ಅವಿನಾಶ್, ಅಮಿತ್, ದರ್ಶನ್ ಎಂಬುವವರನ್ನು ಬಂಧಿಸಿದ್ದಾರೆ.
ತಲೆಯಲ್ಲಿ ತಲ್ವಾರ್ ನೋಡಿದ ಜಿಲ್ಲಾಸ್ಪತ್ರೆಯ ವೈದ್ಯರು ರೋಗಿ ಸ್ಥಿತಿ ಗಂಭೀರ ಇದ್ದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಅಲ್ಲಿಂದ ಜೈಲ್ ರೋಡ್ ನಲ್ಲಿರುವ ಖಾಸಗಿ ಆಸ್ಪತ್ರೆ, ಅಲ್ಲಿಂದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸಾಗಣೆ. ಈ ಎರಡು ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ತಲೆಯಲ್ಲಿ ತಲ್ವಾರ್ ಹಾಗೇ ಇತ್ತು. ಕೊನೆಗೆ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಗಾಯಾಳುವನ್ನು ದಾಖಲಿಸಿದ್ದಾರೆ.
ಕೆಲಸ ಕಲಿಸಿಕೊಟ್ಟು ಹೊಟ್ಟೆ ಪಾಡಿಗೆ ಉದ್ಯೋಗ ಕೊಟ್ಟ ವ್ಯಕ್ತಿಯನ್ನೇ ಯುವಕರು ಮರ್ಡರ್ ಮಾಡಲು ಮುಂದಾಗಿದ್ದರು. ತಲ್ವಾರ್ ದಾಳಿಗೊಳಗಾದ ವ್ಯಕ್ತಿಯು ಸದ್ಯ ಸಾವು ಬದುಕಿನಲ್ಲಿ ಹೋರಾಡುತ್ತಿದ್ದಾನೆ. ಇಂತಹ ಘಟನೆಯಿಂದ ಶಿವಮೊಗ್ಗ ಜನರದ ಜನರು ಬೆಚ್ಚಿಬಿದ್ದಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply