ಮಲೆನಾಡಿಗರಿಗೆ ತಟ್ಟಿದ ಟೋಲ್ ಬಿಸಿ ! ಬಸ್ ಅಡ್ಡ ನಿಲ್ಲಿಸಿ ಪ್ರತಿಭಟನೆ !
ಶಿವಮೊಗ್ಗ : ಇತ್ತೀಚಿಗೆ ಸವಳಂಗ ರಸ್ತೆಯ ಕಲ್ಲಾಪುರದ ಬಳಿ ನಿರ್ಮಾಣವಾಗಿರುವಂತಹ ಟೋಲ್ ಗೇಟ್ವಿ ರುದ್ಧ ನಿನ್ನೆ ರೈತರು, ಸ್ಥಳೀಯರು, ವಿವಿಧ ಸಂಘಟನೆಗಳ ಮುಖಂಡರು ದಿಡೀರ್ ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗ ಶಿಕಾರಿಪುರ ಹಾನಗಲ್ ರಾಜ್ಯ ಹೆದ್ದಾರಿಯ ಕಲ್ಲಾಪುರ ಮತ್ತು ಕುಟ್ರಳ್ಳಿಯಲ್ಲಿ ಟೋಲ್ ಗೇಟ್ಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಖಾಸಗಿ ಬಸ್ ಮಾಲೀಕರಿಗೆ ಹೊರೆಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೆ ಟೋಲ್ ಸಂಗ್ರಹ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ಸವಳಂಗದ ಬಳಿ ಇರುವ ಕಲ್ಲಾಪುರದಲ್ಲಿ ಬಸ್ಗಳನ್ನು ಅಡ್ಡ ನಿಲ್ಲಿಸಿ, ಖಾಸಗಿ ಬಸ್ ಅಡ್ಡ ನಿಲ್ಲಿಸಿ ದಿಢೀರ್ ಪ್ರತಿಭಟನೆ ನಡೆಸಿದರು. ಅಂತರ ಜಿಲ್ಲೆ ಸಂಪರ್ಕಿಸುವ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನ ನಿತ್ಯ ಸಂಚರಿಸುತ್ತವೆ.
ಎರಡು ಟೋಲ್ಗಳ ಅಕ್ಕಪಕ್ಕ ಹತ್ತಾರು ಹಳ್ಳಿಗಳಿವೆ. ರೈತರು ತೋಟ ಗದ್ದೆಗೆ ತೆರಳಲು ಟೋಲ್ ಪಾವತಿಸಬೇಕಾಗುತ್ತಿದೆ. ಟೋಲ್ ಪಾವತಿಸುವುದಕ್ಕೆ ಪ್ರತಿ ತಿಂಗಳು ಖಾಸಗಿ ಬಸ್ ಮಾಲೀಕರಿಗೆ ಅಂದಾಜು ₹25 ಸಾವಿರ ಹೆಚ್ಚು ಹೊರೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹೆಚ್ಚುವರಿ ಹೊರೆಯನ್ನು ಪ್ರಯಾಣಿಕರ ಮೇಲೆ ಹೊರಿಸಬೇಕಾಗುತ್ತದೆ. ಬಡವರು ಬಸ್ ಹತ್ತುವುದು ಕಷ್ಟವಾಗಲಿದೆ ಎ೦ದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply