ಯೋ.. ಬರ್ಕೊಳಯ್ಯ, ಶಿವಮೊಗ್ಗ ನಂದು : ಸಂತೆಕಡೂರಿನಲ್ಲಿ ಪತ್ನಿ ಪರ ಪ್ರಚಾರದಲ್ಲಿ ಶಿವಣ್ಣ ಮಾಸ್ ಡೈಲಾಗ್ !
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆಳಿದಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಪುತ್ರಿ ಹಾಗೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರ ಪರವಾಗಿ ನಟ ಶಿವರಾಜ್ ಕುಮಾರ್ ಇಂದು ಚುನಾವಣಾ ಪ್ರಚಾರ ನಡೆಸಿದರು ಈ ವೇಳೆ ಜೋಗಯ್ಯ ಸಿನಿಮಾದ ಡೈಲಾಗ್ ಹೇಳಿದ್ದು ಕಾರ್ಯಕರ್ತರಲ್ಲಿ ಹುಮ್ಮಸ್ಸು ನೀಡಿತು.
ಶಿವಮೊಗ್ಗದ ಸಂತೆಕಡೂರಿನಲ್ಲಿ ಪತ್ನಿ ಹಾಗೂ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಪರ ಶಿವಣ್ಣ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಮೊದಲ ಸಲ ನಿಮ್ಮ ಊರಿಗೆ ಬಂದಿದ್ದೇನೆ ಎಂದು ಡೈಲಾಗ್ ಹೊಡೆದಿದ್ದು, ‘ಯೋ ಬರ್ಕೊಳಯ್ಯ ಮುಂದುಗಡೆ ಪೇಪರಲ್ಲಿ ಬರ್ಕೋ ಶಿವಮೊಗ್ಗ ನಂದು’ ಎಂದು ಜೋಗಯ್ಯ ಸಿನಿಮಾದ ಡೈಲಾಗ್ ಹೊಡೆದು ನೆರೆದಿರುವ ಕಾರ್ಯಕರ್ತರನ್ನು ರಂಜಿಸಿದರು.
ಈ ವೇಳೆ ಗೀತಾ ಪರ ಪ್ರಚಾರದ ವೇಳೆ ಶಿವಣ್ಣ ಹೇಳಿಕೆ ನೀಡಿದ್ದು, ಗೀತಾ ಅವರಲ್ಲಿ ರಕ್ತದಲ್ಲಿ ರಾಜಕೀಯ ಇದೆ. ಆದರೆ ನನಗೆ ಇಲ್ಲ ಬಂಗಾರಪ್ಪ ಅವರ ಮಗಳನ್ನು ಮದುವೆ ಆಗಿದ್ದೇನೆ ನಿಮ್ಮ ಮನೆ ಮಗಳಿಗೆ ಒಂದು ಉಡುಗೊರೆ ನೀಡಿ ಶಿವಮೊಗ್ಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡುತ್ತಾರೆ ನನಗಿಂತ ಮೊದಲು ಶಿವಮೊಗ್ಗ ಜಿಲ್ಲೆಯ ಮಗಳು ಎಂದು ಮತದಾರರಲ್ಲಿ ಶಿವಣ್ಣ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಗೀತಾ ಶಿವರಾಜ್ ಕುಮಾರ್ ನನಗೆ ನೀವು ಮತ ಹಾಕಲೇ ಬೇಕು. ನಾನು ಈ ಜಿಲ್ಲೆಯ ಮಗಳು ಖಾಲಿ ಕೈಯಲ್ಲಿ ಕಳುಹಿಸುವ ಹಾಗಿಲ್ಲ. ಕಳೆದ ಬಾರಿ ಸೋತಿದ್ದೇವೆ. ಈ ಬಾರಿ ನೀವು ಬರಿಗೈಯಲ್ಲಿ ಕಳುಹಿಸೊಲ್ಲ ಎಂದು ಭಾವಿಸಿರುವೆ. ನನ್ನ ವಿರುದ್ಧ ಟೀಕಾ ಟಿಪ್ಪಣಿ ಮಾಡಲಾಗುತ್ತಿದೆ. ಆದರೆ ಮೇ. 7 ರಂದು ಮತಗಳ ಮೂಲಕ ಉತ್ತರಿಸಬೇಕು ಎಂದು ಹೇಳಿದರು.ಎಂದು ಹೇಳಿದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply