ಗಾಡಿಕೊಪ್ಪದಲ್ಲಿ ಮನೆಯಲ್ಲಿಯೇ ವಿವಾಹಿತ ಮಹಿಳೆ ನೇಣಿಗೆ ಶರಣು ! ಮೂವರ ವಿರುದ್ಧ ಕೇಸ್ !
ಶಿವಮೊಗ್ಗ : ಮನೆಯಲ್ಲಿಯೇ ವಿವಾಹಿತ ಸಾಪ್ಟ್‌ವೇರ್ ಉದ್ಯೋಗಿ ಮಹಿಳೆಯೊಬ್ಬರು ನೇಣಿಗೆ ಕೊರಳೋಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಗಾಡಿಕೊಪ್ಪದಲ್ಲಿ ನಡೆದಿದೆ.
ಪತಿ ಹಾಗೂ ಆತನ ಮನೆಯ ಕಡೆಯವರ ಕಿರುಕುಳ ತಾಳಲಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು. 29 ನೇ ತಾರೀಕು ಶನಿವಾರ ಈ ಘಟನೆ ನಡೆದಿದೆ.
ಮೃತ ಮಹಿಳೆ ತನಿಗಾಗುತ್ತಿರುವ ಕಿರುಕುಳವನ್ನು ತನ್ನ ತವರು ಮನೆಯವರ ಹತ್ತಿರ ಹೇಳಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ತನ್ನ ತವರು ಮನೆಗೆ ಕರೆ ಮಾಡಿದ್ದ ಮಹಿಳೆಯ ಕಾಲ್ ರೆಕಾರ್ಡನ್ನು ಮಾಡಿಕೊಂಡಿದ್ದ ಮನೆಯವರು. ನಂತರ ವಿಚಾರಿಸಲು ಗಂಡನ ಮನೆಗೆ ಹೋಗಿದ್ದಾಗ ಆಕೆ ಬಾಗಿಲು ಹಾಕಿಕೊಂಡಿದ್ದಾರೆ. ತಟ್ಟಿದರು ಬಾಗಿಲು ತೆಗೆಯದ ಕಾರಣ ರೂಮಿನ ಬಾಗಿಲು ಹೊಡೆದು ಒಳಗೆ ನೋಡಿದಾಗ ಮಹಿಳೆ ನೇಣು ಹಾಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನ ಅಶ್ವಿನಿ(31) ಎಂದು ಗುರುತಿಸಲಾಗಿದೆ. ಐದು ವರ್ಷದ ಹಿಂದೆ ಅಶ್ವಿನಿ ಅಭಿಲಾಷನೊಂದಿಗೆ ಮದುವೆ ಆಗಿದ್ದಳು.
ಮದುವೆಯಾಗಿ ಐದು ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂದು ಅಭಿಲಾಷ, ಅತ್ತೆ ಶೋಭಾ,ಮಾವ ನಾಗರಾಜ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದ್ದು.ಪತಿ ಹಾಗೂ ಅತ್ತೆ ಮಾವನ ವಿರುದ್ಧ ಎಫ್‌ಐಆರ್ ದಾಖಲಾಗಿದೆ
ಈ ಪ್ರಕರಣದ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply