ಜಗಳ ಬಿಡಿಸಲು ಹೋದ ಪೊಲೀಸ್ ಮೇಲೆಯೇ ಹಲ್ಲೆ ! ಪೊಲೀಸರಿಗೆ ವಾರ್ನಿಂಗ್ !
ಸಾಗರ : ಜಾತ್ರೆಯ ಬಂದೋಸ್ತ್ ನಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ ಮಾಡಿ ವಾರ್ನಿಂಗ್ ನೀಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದ ಗೌತಮ ಪುರದಲ್ಲಿ ನಡೆದಿದೆ.
ಸಾಗರ ತಾಲೂಕಿನ ಆನಂದಪುರದ ಗೌತಮಪುರದಲ್ಲಿ ಮಾರಿಕಾಂಬ ಜಾತ್ರೆ ನಡೆಯುತ್ತಿದೆ, ಡಿಆರ್ ಪೊಲೀಸ್ ಸಿಬ್ಬಂದಿ ಕಿರಣ್ ಎಂಬುವವರು ಜಾತ್ರಾ ಬಂದೋಬಸ್ತ್ ನಲ್ಲಿದ್ದರು, ಇವರ ಸಮ್ಮುಖದಲ್ಲಿ ಕೆಲ ಯುವಕರು ಗಲಾಟೆ ಮಾಡಿಕೊಳ್ಳುತ್ತಿದ್ದರು, ಅಂಗಡಿ ಮುಂಗಟ್ಟುಗಳ ಮುಂದೆ ದಾಂದಲೇ ಮಾಡುತ್ತಿದ್ದರು.
ಇದನ್ನು ನೋಡಿದ ಪೊಲೀಸ್ ಸಿಬ್ಬಂದಿ ಕಿರಣ್ ಜಗಳ ಬಿಡಿಸಲು ಮುಂದಾಗಿದ್ದಾರೆ, ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇದಲ್ಲದೆ ಪೊಲೀಸ್ ಸಮವಸ್ತ್ರ ವನ್ನು ಹರಿದಿದ್ದಾರೆ. ದೊಡ್ಡವರ ಹೆಸರು ಹೇಳಿಕೊಂಡು ನಮ್ಮ ತಂಟೆಗೆ ಬಂದರೆ ಹುಷಾರ್ ಎಂದು ಪೊಲೀಸರಿಗೆ ವಾರ್ನಿಂಗ್ ನೀಡಿದ್ದಾರೆ.
ಹಲ್ಲೆ ಮಾಡುತ್ತಿರುವ ದೃಶ್ಯಗಳು ಸ್ಥಳೀಯ ಕ್ಯಾಮೆರಾ ಗಳಲ್ಲಿ ಸೆರೆಯಾಗಿದೆ. ಈ ಪ್ರಕರಣದ ಸಂಬಂಧ ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದ್ದು. ಜಿಲ್ಲೆಯಲ್ಲಿ ಸದ್ಯ ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಎಸ್ ಪಿ ಮಿಥುನ್ ಕುಮಾರ್ ರವರ ಗಮನಕ್ಕೂ ಈ ವಿಚಾರ ತಲುಪಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply