ಸಿಟಿ ಬಸ್ ನ ಟೈಯರ್ ಬ್ಲಾಸ್ಟ್ ! ಬಸ್ ಒಳಗೆ ರಂದ್ರವಾಗಿ ಕೆಳಗೆ ಬಿದ್ದ ಬಾಲಕಿ ! ಡಿವೈಡರ್ ಗೆ ಡಿಕ್ಕಿ !
ಶಿವಮೊಗ್ಗ : ನಗರದಲ್ಲಿ ಬಸ್ ನ ಟೈಯರ್ ಸ್ಫೋಟಗೊಂಡು, ಸ್ಫೋಟದ ರಭಸಕ್ಕೆ ಬಸ್ ಒಳಗೆ ರಂದ್ರವಾಗಿ ಬಾಲಕಿಯೋಬ್ಬಳು ಕೆಳಗೆ ಬಿದ್ದಿರುವ ಘಟನೆ ಶಿವಮೊಗ್ಗದ ನೆಹರು ರಸ್ತೆಯಲ್ಲಿ ನಡೆದಿದೆ.
ಬೊಮ್ಮನಕಟ್ಟೆಯಿಂದ ಗೋಪಾಳದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಒಂದರ ಟೈಯರ್ ಸ್ಪೋಟಗೊಂಡಿದೆ. ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಬಾಲಕಿ ಬಸ್ಸಿನಿಂದ ಕೆಳಕ್ಕೆ ಬಿದ್ದಿದ್ದಾಳೆ. ಸ್ಪೋಟದ ರಭಸಕ್ಕೆ ಬಸ್ಸಿನ ಒಳಗಡೆ ಗುಂಡಿಯಾಗಿದೆ. ಗುಂಡಿಯಿಂದ ಬಾಲಕಿ ಕೆಳಗೆ ಬಿದ್ದಿದ್ದಾಳೆ.
ಚಾಲಕನ ನಿಯಂತ್ರಣ ತಪ್ಪಿ ಬಸ್ಸು ನೆಹರು ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಬಾಲಕಿಯನ್ನು ಸ್ಥಳೀಯರ ಸಾರ್ವಜನಿಕರ ಸಹಕಾರದೊಂದಿಗೆ ಆಟೋದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಅದೃಷ್ಟವಶಾತ್ ಬಾಲಕಿಯ ಪ್ರಾಣ ಉಳಿದಿದೆ.
ಘಟನೆಯಿಂದಾಗಿ ನೆಹರು ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪಶ್ಚಿಮ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply