ಏಪ್ರಿಲ್ 10 ರಿಂದ ಮಕ್ಕಳ ಬೇಸಿಗೆ ತರಬೇತಿ ಶಿಬಿರ ಆರಂಭ !

ಏಪ್ರಿಲ್ 10 ರಿಂದ ಮಕ್ಕಳ ಬೇಸಿಗೆ ತರಬೇತಿ ಶಿಬಿರ ಆರಂಭ !

ಆನಂದಪುರ : ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಹಲವು ಕ್ಷೇತ್ರಗಳ ಆಸಕ್ತಿಯ ರೆಕ್ಕೆ–ಪುಕ್ಕ ಮೂಡಿಸುತ್ತವೆ. ಮಕ್ಕಳ ಕೌಶಲ್ಯಾಭಿವೃದ್ಧಿ ಹೆಚ್ಚಿಸುವಂತಹ ವಿಶೇಷವಾದ ಬೇಸಿಗೆ ಶಿಬಿರ ಸಾಗರದ ಆನಂದಪುರದಲ್ಲಿ ಏರ್ಪಡಿಸಲಾಗಿದೆ.

ಇದೇ ಮೊಟ್ಟ ಮೊದಲ ಬಾರಿಗೆ ಆನಂದಪುರದಲ್ಲಿ ಭಾಶ್ವತ್ ಚಿನ್ನರ ಅಂಗಳ ಚಿಲಿಪಿಲಿ ಕಲರವದಿಂದ ಸುಂದರ ಪರಿಸರದಲ್ಲಿ ಮಕ್ಕಳಿಗಾಗಿ ಹತ್ತು ಹಲವಾರು ಚಟುವಟಿಕೆಗಳನ್ನು ಒಳಗೊಂಡ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಈ ಶಿಬಿರದ ಚಟುವಟಿಕೆಗಳೆಂದರೆ ಭರತನಾಟ್ಯ, ಸಂಗೀತ, ಯೋಗಾಸನ, ಚಿತ್ರಕಲೆ, ಹೆಬ್ಬೆರಳು ಕಲೆ, ಮೋಜಿನ ಆಟಗಳು, ಸಂಸ್ಕೃತ ಶ್ಲೋಕ, ಅಭಿನಯ ಗೀತೆ, ದೇವರ ನಾಮ, ಕಲಾ ಸೌಧಾ, 3D ಚಿತ್ರಗಳು, ಬೆಂಕಿ ಇಲ್ಲದೆ ಅಡಿಗೆ, ರೂಲ್ ಪ್ಲೇ ಮತ್ತು ಅಲಂಕಾರಿಕ ಉಡುಗೆ ಈ ಹತ್ತು ಹಲವಾರು ಚಟುವಟಿಕೆಗಳನ್ನು ಈ ಶಿಬಿರದಲ್ಲಿ ಆಯೋಜಿಸಲಾಗಿದೆ.

ಏಪ್ರಿಲ್ 10 ರಿಂದ ಈ ಶಿಬಿರವು ಪ್ರಾರಂಭಗೊಳ್ಳಲಿದೆ. ಆಸಕ್ತಿ ಇರುವ ಮಕ್ಕಳು 5 ರಿಂದ 16 ವರ್ಷದ ಒಳಗಿನ ಮಕ್ಕಳು ಬಂದು ಸೇರಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ : 7619574968, 9008616958

 


Leave a Reply

Your email address will not be published.