ಲಾಡ್ಜ್ ನಲ್ಲಿ ಮಹಿಳೆಯ ಕತ್ತು ಸೀಳಿ ಕೊಲೆ ! ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ !
ಶಿವಮೊಗ್ಗ : ನಗರದ ಹಣಗರೆಕಟ್ಟೆಯ ಸಮೀಪದ ಖಾಸಗಿ ಲಾಡ್ಜ್ ಒಂದರಲ್ಲಿ ಮಹಿಳೆಯ ಮೃತ ದೇಹ ಒಂದು ಪತ್ತೆಯಾಗಿದೆ.
ಹಜರತ್ ಸೈಯದ್ ಸಾದತ್ ಭೂತರಾಯ ಚೌಡೇಶ್ವರಿ ದೇವಾಲಯದ ಹಿಂಭಾಗದಲ್ಲಿ ಇರುವಂತಹ ಖಾಸಗಿ ಲಾಡ್ಜ್ ನಲ್ಲಿ ಸರಿಸುಮಾರು 30 ವರ್ಷದ ವಯಸ್ಸಿನ ಮಹಿಳೆ ಮತ್ತು ಒಬ್ಬ ಪುರುಷ ಎರಡು ಮೂರು ದಿನದ ಹಿಂದೆ ಬಂದು ತಂಗಿದ್ದರು ಎಂದು ಮಾಹಿತಿ ತಿಳಿದುಬಂದಿದೆ
ನಂತರ ವಾಪಸ್ ಹೋಗುವಾಗ ವ್ಯಕ್ತಿ ಮಾತ್ರ ವಾಪಸ್ ರೂಮಿನಿಂದ ಹೊರ ಹೋಗಿದ್ದಾನೆ ಎಂದು ಅಲ್ಲಿದ್ದ ಕೆಲಸದ ಸಿಬ್ಬಂದಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದಿದೆ.
ಜಾಹಿರಾತು :
ಖಾಸಗಿ ಲಾಡ್ಜ್ ರೂಮ್ ಒಂದರಲ್ಲಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ಎರಡು ದಿನಗಳ ಹಿಂದೆಯೇ ಕೊಲೆಯಾಗಿದೆ ಎಂದು ಹೇಳಲಾಗಿದೆ. ಇನ್ನು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು. ವಿಚಾರಣೆ ನಡೆಸುತ್ತಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply