ವಿಶೇಷ ಲೇಖನ  : ಬಿಸಿಲ ತಾಪಕ್ಕೆ ಕಾದ ಹೆಂಚಿಂನಂತಾದ ಧರೆ : ಜನತೆ ಹೈರಾಣು.

ವಿಶೇಷ ಲೇಖನ  : ಬಿಸಿಲ ತಾಪಕ್ಕೆ ಕಾದ ಹೆಂಚಿಂನಂತಾದ ಧರೆ : ಜನತೆ ಹೈರಾಣು !

ರಾಜ್ಯದಲ್ಲಿ ಬೇಸಿಗೆಯ ಬಿಸಿಲ ಅಬ್ಬರ ಜೋರಾಗಿದ್ದು ಬೆಳಿಗ್ಗೆ ಗಂಟೆ 9 ಆಗುತ್ತಿದ್ದಂತೆ ಹೊರಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಅಷ್ಟು ಏರುತ್ತಿದೆ ಸೂರ್ಯನ ತಾಪ. ಭೂಮಿಯ ಧಗೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಕಾಡುಗಳು ಒಣಗಿ ಕಾದ ಕಬ್ಬಿಣದಂತಾಗಿವೆ. ಮರಗಳೆಲ್ಲ ಎಲೆ ಉದುರಿಸಿ ಬೋಳಾಗಿ ನಿಂತಿದೆ. ತಾಪಮಾನ ಏರುತ್ತಿರುವ ಹಿನ್ನಲೆ ಬಿಸಿಲ ಧಗೆಗೆ ಅಕ್ಷರಶಃ ಕರ್ನಾಟಕದ ಜನತೆ ತತ್ತರಿಸಿ ಹೋಗಿದ್ದಾರೆ. ಹೌದು.. ಹಾಲಿ ವರ್ಷ ಬೇಸಿಗೆ ಅಬ್ಬರ ಜೋರಾಗಿದ್ದು, ಹಿಂದಿನ ವರ್ಷವೂ ಬಿಸಿಲಿನ ಅಬ್ಬರ ಜೋರಾಗಿತ್ತು . ಬಿಸಿಲ ತಾಪ ಹೇಗಿದೆ ಎಂದರೆ ಜನರು ಅಕ್ಷರಶಃ ಬೆಂದು ಹೋಗುತ್ತಿದ್ದಾರೆ. ಈಗಿನ ಸ್ಥಿತಿ ನೋಡಿದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಸಿಲು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಸಮಯದಲ್ಲಿ ಸಾಮಾನ್ಯವಾಗಿ 24ರಿಂದ 26 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತಿದ್ದ ಬಿಸಿಲಿನ ತಾಪಮಾನ ಈಗ 36ರಿಂದ 38ಕ್ಕೆ ಏರಿಕೆಯಾಗಿದೆ.ದಿನದಿಂದ ದಿನಕ್ಕೆ ಈ ಕಾವು ಏರುತ್ತಲೇ ಇರುವ ಕಾರಣ ಜನ ಮನೆ ಬಿಟ್ಟು ಹೊರಗಡೆ ಬರಲು ಹಿಂದೇಟು ಹಾಕುವಂತಾಗಿದೆ. ಬಿಸಿಲ ಪ್ರಖರತೆಗೆ ಜನತೆ ಬಸವಳಿದಿದ್ದಾರೆ. ನೆತ್ತಿ ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು ಕೂಲಿ ಕಾರ್ಮಿಕರು ಕೆಲ ಹೊತ್ತು ಕೆಲಸ ಮಾಡಿ ಸುಸ್ತಾಗಿ ಮರಗಳ ನೆರಳಿನ ಆಸರೆ ಪಡೆಯುತ್ತಿರುವುದು ಕಂಡುಬರುತ್ತಿದೆ. ನೆರಳು ಸಿಕ್ಕರೆ ಪರಮಾನಂದ ಅನುಭವಿಸುತ್ತಿದ್ದಾರೆ. ಕೇವಲ ಮನುಷ್ಯರಷ್ಟೇ ಅಲ್ಲದೆ ಬಿರುಬಿಸಿಲಿಗೆ ಜಾನುವಾರು, ಪಕ್ಷಿ ಮತ್ತು ಪ್ರಾಣಿಗಳು ಕೂಡ ನಲುಗುವಂತಾಗಿದೆ.

ಮಣ್ಣಿನ ಮಡಿಕೆಗೆ ಮೊರೆ ಹೋಗುತ್ತಿರುವ ಜನ.

ಕೋವಿಡ್‌ ಬಳಿಕ ಆರೋಗ್ಯದ ವಿಷಯದಲ್ಲಿ ಹೆಚ್ಚು ಕಾಳಜಿ ವಹಿಸುತ್ತಿರುವ ಜನ ಫ್ರಿಡ್ಜ್‌ನ ನೀರು ಕುಡಿಯುವ ಬದಲು ಸಾಂಪ್ರದಾಯಿಕ ಶೈಲಿಯ ಗಡಿಗೆಗಳನ್ನು ಬಳಸುತ್ತಿದ್ದಾರೆ.’ಬಡವರ ಫ್ರಿಡ್ಜ್‌’ ಎನಿಸಿರುವ ಗಡಿಗೆಯಲ್ಲಿ ನೀರು ಹಾಕಿಟ್ಟರೆ ತಂಪಾಗಿ ದೇಹಕ್ಕೂ ಹಿತವೆನಿಸುತ್ತದೆ.ಇನ್ನಷ್ಟು ನೀರು ಕುಡಿಯಬೇಕು ಎನಿಸುತ್ತದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ವಿವಿಧ ವಿನ್ಯಾಸಗಳ ಮಡಿಕೆಗಳು ಮಾರಾಟಕ್ಕೆ ಬಂದಿವೆ. ಸಾಂಪ್ರದಾಯಿಕ ಗಡಿಗೆಗಳ ಜೊತೆಗೆ ಗ್ರಾಹಕರನ್ನು ಸೆಳೆಯಲು ರಾಜಸ್ಥಾನದ ಶೈಲಿಯಲ್ಲಿ ಮಣ್ಣಿನ ಸಾಮಗ್ರಿಗಳು ಕೂಡ ಶಿವಮೊಗ್ಗಕ್ಕೆ ಲಗ್ಗೆ ಇಟ್ಟಿವೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಬಿಸಿಲಿನ ದಾಹ ತಣಿಸಿಕೊಳ್ಳಲು ಹಣ್ಣುಗಳು ಮತ್ತು ತಂಪು ಪಾನೀಯಗಳ ಮೊರೆ

ಹೌದು ಬಿಸಿಲ ಪ್ರಖರತೆಗೆ ಜನತೆ ಹೈರಾಣಗಿದ್ದಾರೆ. ಬಿಸಿಲಲ್ಲಿ ದಾಹ ತಣಿಸಿಕೊಳ್ಳಲು ತಂಪು ಪಾನೀಯ, ನೀರಿನ ಅಂಶ ಹೆಚ್ಚಾಗಿರುವ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ.

ಬಿಸಿಲು ಜನರನ್ನು ಹೈರಾಣ ಮಾಡಿದರೆ ಹಣ್ಣುಗಳ ವ್ಯಾಪಾರಿಗಳಿಗೆ ಇದುವೇ ಬಂಡವಾಳವಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ದ್ರಾಕ್ಷಿ ಹಾಗೂ ಕಲ್ಲಂಗಡಿ ಹಣ್ಣುಗಳ ಮಾರಾಟ ಜೋರಾಗಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಕಲ್ಲಂಗಡಿಗಳ ರಾಶಿಗಳನ್ನು ಹಾಕಲಾಗಿದೆ .ಇವುಗಳ ಜೊತೆಗೆ ಸೇಬು, ಮಾವಿನ ಹಣ್ಣು, ದ್ರಾಕ್ಷಿ, ಚಿಕ್ಕು, ಮೋಸಂಬಿ, ಪೈನಾಪಲ್‌, ದಾಳಿಂಬೆ, ಬಾಳೆಹಣ್ಣು, ಎಳೆನೀರು, ಕಬ್ಬಿನ ಹಾಲು, ವಿವಿಧ ಹಣ್ಣುಗಳ ಜ್ಯೂಸ್‌ಗಳು, ನಿಂಬೆಹಣ್ಣಿನ ಪಾನಕ, ಸೋಡಾ, ಮಜ್ಜಿಗೆ, ಲಸ್ಸಿ, ರಾಗಿ ಶರಬತ್‌ ಹೀಗೆ ತರಹೇವಾರಿ ತಂಪು ಪಾನೀಯ ಮತ್ತು ಹಣ್ಣುಗಳನ್ನು ಸವಿಯುತ್ತಿದ್ದಾರೆ.

ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇರಿಸಿ

ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಹೊರಾಂಗಣ ಚಟುವಟಿಕೆಗಳನ್ನು ಬೆಳಿಗ್ಗೆ 11 ಗಂಟೆಯ ಮೊದಲು ಮತ್ತು ಮಧ್ಯಾಹ್ನ 3 ಅಥವಾ 4 ಗಂಟೆಯ ನಂತರ ಸೀಮಿತಗೊಳಿಸುವುದು ಸೂಕ್ತ. ಹೊರಾಂಗಣದಲ್ಲಿ ಆಡುವಾಗ, ಸಡಿಲವಾದ ಬಿಳಿ ಹತ್ತಿ ಬಟ್ಟೆಗಳನ್ನು ಧರಿಸುವುದು ಮುಖ್ಯ, ಅಗಲವಾದ ಅಂಚುಗಳ ಟೋಪಿಗಳು ಸಹಾಯ ಮಾಡುತ್ತದೆ, 

ಮಕ್ಕಳು ಹೊರಾಂಗಣದಲ್ಲಿ ಬಿಸಿಲನ್ನು ದೀರ್ಘಕಾಲದವರೆಗೂ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ಮಕ್ಕಳಿಗೆ 30 ಅಥವಾ ಅದಕ್ಕಿಂತ ಹೆಚ್ಚಿನ SPF ನೊಂದಿಗೆ ಸನ್‌ಸ್ಕ್ರೀನ್ ಅನ್ನು ಬಳಸುವುದು ಮುಖ್ಯವಾಗಿದೆ. ಹಾಲುಣಿಸುವ ಚಿಕ್ಕ ಮಕ್ಕಳನ್ನು ಬಟ್ಟೆಗಳಿಂದ ಸುತ್ತಬಾರದು.

ಮತ್ತು ಮಕ್ಕಳಿಗೆ ಎಳನೀರು, ಒಆರ್ಎಸ್, ಗಂಜಿ ಇತ್ಯಾಗಿ ದ್ರವ ಪದಾರ್ಥಗಳನ್ನು ಹೆಚ್ಚಾಗಿ ನೀಡಿ. ಇದು ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಲಿದೆ. ಆರೋಗ್ಯಕರ ಆಹಾರ, ಶುದ್ಧ ನೀರು, ಹಣ್ಣುಗಳು ಮತ್ತು ಹಣ್ಣಿನ ರಸವನ್ನು ನೀಡಿ. ಚರ್ಮದ ರಕ್ಷಣೆಗಾಗಿ ಟೋಪಿಗಳು, ಛತ್ರಿ ಮತ್ತು ಸನ್‌ಸ್ಕ್ರೀನ್ ಗಳಂತಹ ವಸ್ತುಗಳನ್ನು ಬಳಸಿ.ಎಂದು ತಜ್ಞರು ಹೇಳುತ್ತಾರೆ.

ಬಿಸಿಲಿನ ತಾಪದಿಂದ ಜೀವಸಂಕುಲಕ್ಕೂ ಸಂಕಷ್ಟ

ರಾಜ್ಯದಲ್ಲಿ ದಿನೇ ದಿನೆ ಬಿಸಿಲ ಝಳ ಹೆಚ್ಚುತ್ತಿದೆ. ನಗರಗಳು ಬೆಳೆಯುತ್ತಿರುವ ವೇಗದಿಂದಾಗಿ ಇಲ್ಲಿಯೇ ನೆಲೆ ಕಂಡುಕೊಂಡಿರುವ ಪ್ರಾಣಿ-ಪಕ್ಷಿಗಳಿಗೆ ಒಂದಲ್ಲಾ ಒಂದು ರೀತಿ ಪ್ರತ್ಯಕ್ಷ-ಪರೋಕ್ಷ ಸಂಕಷ್ಟಎದುರಾಗಿದೆ. ಸುಡು ಬೇಸಿಗೆಯಲ್ಲಿ ಆಹಾರದ ಜತೆ ನೀರನ್ನು ಹುಡುಕಲೂ ಪರದಾಡುವ ಸ್ಥಿತಿ ಆ ಮೂಕ ಜೀವಿಗಳಾದ್ದಾಗಿದೆ. ಸುಡು ಬಿಸಿಲಿನ ಬೇಗೆಯಿಂದ ಎಲ್ಲ ಜೀವರಾಶಿಗಳು ತತ್ತರಿಸುತ್ತಿವೆ. ಮನುಷ್ಯರಷ್ಟೇ ಅಲ್ಲದೆ,ಪ್ರಾಣಿ-ಪಕ್ಷಿಗಳೂ ಕುಡಿಯುವ ನೀರು ಮತ್ತು ಆಹಾರಕ್ಕಾಗಿ ಹುಡುಕಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು, ಮಾರ್ಚ್‌ ತಿಂಗಳಿಗಿಂತ ಏಪ್ರಿಲ್‌ ತಿಂಗಳಲ್ಲಿ ಸೂರ್ಯನಪ್ರಖರತೆ ಮತ್ತಷ್ಟು ಹೆಚ್ಚಾಗಿದೆ. ಬೇಸಿಗೆಯ ಸುಡು ಬಿಸಿಲಿನಪರಿಣಾಮ, ಸವಳಿಯುತ್ತಿವೆ. ಬಿಸಿಲಿನ ಶಾಖಕ್ಕೆ ನಿತ್ರಾಣಗೊಳ್ಳುತ್ತಿರುವ ಪಕ್ಷಿಗಳು, ಕುಡಿಯುವ ನೀರು ಸಿಗದೆ ಸಂಕಷ್ಟಕ್ಕೆ ಸಿಲುಕುತ್ತಿವೆ

ಬಿಸಿಲ ತಾಪಕ್ಕೆ ನಿತ್ಯ ನೂರಾರು ಪಕ್ಷಿಗಳು ನಿತ್ರಾಣದಿಂದ ನೆಲಕ್ಕೆ ಬೀಳುತ್ತವೆ. ಹದ್ದು ಗಳು ಈ ರೀತಿ ಕೆಳಗೆ ಬೀಳುವ ಪಕ್ಷಿಗಳಲ್ಲಿ ಹೆಚ್ಚು. ಕಾಗೆ, ಗೂಬೆ, ಪಾರಿವಾಳಗಳುಅಲ್ಲದೆ, ನಾಯಿ, ಅಳಿಲು, ಬೆಕ್ಕು ಹಾ ಗೂ ಮಂಗಗಳೂ ಬಿಸಿಲ ತಾಪಕ್ಕೆ ಬಸವಳಿಯುತ್ತವೆ. ಬಿಸಿಲ ತಾಪಕೆ ನಲುಗುವ ಪಕ್ಷಿಗಳ ದೇಹದಲ್ಲಿ ನೀರಿನ ಅಂಶ ಕಡಿಮೆ ಯಾದಾಗ ಮೂರ್ಛೆ (ಪ್ರಜ್ಞೆ) ತಪ್ಪಿ ಕೆಳಗೆ ಬೀಳುತ್ತವೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಪಕ್ಷಿಗಳಿಗೆ ಚಿಕಿತ್ಸೆ ಅಗತ್ಯವಾಗುತ್ತದೆ..

ಮಡಿಕೆಯಲ್ಲಿ ಶುದ್ಧ ನೀರಿಡಿ 

ಪಕ್ಷಿಗಳಿಗೆ ನೀರು ಇಡಿ ಎಂದ ಮಾತ್ರಕ್ಕೆ ಜನರು, ಬಕೆಟ್‌ ಅಥವಾ ಡ್ರಮ್‌ಗಳಲ್ಲಿ ನೀರುಇಡಬಾರದು. ನೀರು ಕುಡಿಯಲು ಹೋಗುವ ಪಕ್ಷಿಗಳುಅದರಲ್ಲಿ ಬಿದ್ದರೆಸಾವನ್ನಪ್ಪುವಸಂಭವವಿರುತ್ತದೆ. ಬದಲಾಗಿ, ಚಿಕ್ಕ ಚಿಕ್ಕ ಮಣ್ಣಿನ ಮಡಿಕೆಯಲ್ಲಿ ಶುದ್ಧವಾದ ನೀರನ್ನು ಇಡಬೇಕು. ಎರಡುದಿ ನಕ್ಕೊಮ್ಮೆ ನೀರನ್ನು ಬದಲಾಯಿಸಬೇಕು.ಬೇಸಿಗೆಯಲ್ಲಿ ನಾಲ್ಕು ತಿಂಗಳು ನಾಗರಿಕರು ಸಹಕಾರನೀಡಿದರೆ ವನ್ಯಜೀವಿ ಸಂಕುಲ ಉಳಿಯುತ್ತದೆ ಎಂದು ವನ್ಯಜೀವಿ ತಜ್ಞರು ಸಲಹೆ ನೀಡಿದ್ದಾರೆ .ಹಾಗೆ ಕೆಲವೊಂದು ಕಡೆ 

ಎಲ್ಲೆಲ್ಲಿ ಪಕ್ಷಿಗಳು ಹೆಚ್ಚಾಗಿವೆಯೋ ಅಲ್ಲೆಲ್ಲಾ ನೀರಿನ ಬಟ್ಟಲುಗಳನ್ನಿಟ್ಟು ಪ್ರಾಣಿ-ಪಕ್ಷಿಗಳ ದಾಹ ನೀಗಲು ನಗರದ ಪ್ರಾಣಿ-ಪಕ್ಷಿ ಪ್ರಿಯರು ಮುಂದಾಗಿದ್ದಾರೆ

ಲೇಖನ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.