ಶಿವಮೊಗ್ಗದ ನಾಗರಿಕರೇ ಎಚ್ಚರ..! ಎಚ್ಚರ..! ವಾಕಿಂಗ್ ಹೋಗುವ ಮಹಿಳೆಯರೇ ಇವರ ಟಾರ್ಗೆಟ್..! ಶಿವಮೊಗ್ಗದಲ್ಲಿ ಒಂದೇ ದಿನ ಮೂರು ಕಡೆ ಸರಣಿ ಸರಗಳ್ಳತನ..!

ಶಿವಮೊಗ್ಗದ ನಾಗರಿಕರೇ ಎಚ್ಚರ..! ಎಚ್ಚರ..! ವಾಕಿಂಗ್ ಹೋಗುವ ಮಹಿಳೆಯರೇ ಇವರ ಟಾರ್ಗೆಟ್..! ಶಿವಮೊಗ್ಗದಲ್ಲಿ ಒಂದೇ ದಿನ ಮೂರು ಕಡೆ ಸರಣಿ ಸರಗಳ್ಳತನ..!

ಶಿವಮೊಗ್ಗ : ನಾಗರಿಕರೇ ಎಚ್ಚರ ಎಚ್ಚರ…! ವಾಕಿಂಗ್ ಹೋಗುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಣಿ ಸರಗಳ್ಳತನ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು. ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ.

ಎರಡು ದಿನಗಳ ಹಿಂದಷ್ಟೇ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ಮನೆಯ ಸಮೀಪ ರೆಡ್ ಪಲ್ಸರ್ ಬೈಕ್ ನಲ್ಲಿ ಬಂದ ಖದಿಮರಿಬ್ಬರೂ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿತ್ತು. ಖದೀಮರ ಕೃತ್ಯ ಕೆ ಎಸ್ ಈಶ್ವರಪ್ಪನವರ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದು ಶಿವಮೊಗ್ಗದಲ್ಲಿ ಬಹಳ ದೊಡ್ಡ ಮಟ್ಟದ ಸದ್ದು ಕೂಡ ಮಾಡಿತು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಇದೀಗ ಅದೇ ದಿನ ಮೂರು ಕಡೆ ಸರಗಳ್ಳತನದ ಪ್ರಕರಣ ದಾಖಲಾಗಿದೆ, ಕೇವಲ ಹತ್ತು ಹದಿನೈದು ನಿಮಿಷಗಳ ಅಂತರದಲ್ಲಿಯೇ ಮೂರು ಕಡೆ ಸರಗಳ್ಳತನ ಮಾಡಿರುವ ಖದೀಮರು. ಮೂರು ಕಡೆ ಕಳ್ಳತನ ಮಾಡುವಾಗ ರೆಡ್ ಕಲರ್ ಪಲ್ಸರ್ ಬೈಕ್ ಅನ್ನೇ ಬಳಸಿದ್ದಾರೆ. ಈಶ್ವರಪ್ಪನವರ ಮನೆಯ ಮುಂದೆ ಕಳ್ಳತನ ಮಾಡುವಾಗ ಸಿಸಿಟಿವಿಯಲ್ಲಿ ಸೆರೆಯಾದ ಖದೀಮರೆ ಈ ಮೂರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಆತಂಕಕಾರಿ ಅನುಮಾನ ಮಾಡಿದೆ. ಮುಂಜಾನೆ ಐದರಿಂದ ಆರು ಗಂಟೆಯ ಸಮಯದಲ್ಲಿ ಮೂರು ಕಡೆ ಕಳ್ಳತನ ಮಾಡಿರುವ ದುಷ್ಕರ್ಮಿಗಳು ಬೆಳ್ಳಂ ಬೆಳಗ್ಗೆ ವಾಕಿಂಗ್ ಹೋಗುವ ಮಹಿಳೆಯರೇ ಇವರ ಟಾರ್ಗೆಟ್ ಆಗಿದ್ದಾರೆ ಎಂದಿನಿಸುತ್ತದೆ.

ಪ್ರಕರಣ ಒಂದು (1) :

ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ಮನೆಯ ಮುಂದೆ ವಾಕಿಂಗ್ ಹೊರಡುತ್ತಿದ್ದ ಇಬ್ಬರೂ ಮಹಿಳೆಯರನ್ನ ಮಾತನಾಡಿಸಿದ ಖದೀಮರು. ಬೈಕಿನಲ್ಲಿ ಬಂದ ಆರೋಪಿಗಳು ಪ್ರಿಂಟಿಂಗ್‌ ಪ್ರೆಸ್‌ ಎಲ್ಲಿದೆ ಅಂತ ಅರ್ಧ ಕನ್ನಡ ಅರ್ಧ ಹಿಂದಿಯ ಭಾಷೆಯಲ್ಲಿ ವಿಚಾರಿಸಿದ್ದಾರೆ. ತಮಗೆ ಗೊತ್ತಿಲ್ಲ ಎಂದು ಮಹಿಳೆ ಇನ್ನೊಬ್ಬರ ಜೊತೆ ತಮ್ಮ ಮನೆಗೆ ಹೊರಟಿದ್ದಾರೆ. ಅಷ್ಟರಲ್ಲಿ ವಿಳಾಸ ಕೇಳುವ ನೆಪದಲ್ಲಿ ಹಿಂಬದಿ ಸವಾರನೊಬ್ಬ ಬೈಕ್‌ ಇಳಿದು ಮಹಿಳೆಯ ಕುತ್ತಿಗೆಗೆ ಕೈಹಾಕಿ ಕುತ್ತಿಗೆಯಲ್ಲಿದ್ದ ಸುಮಾರು 35 ಗ್ರಾಂ ತೂಕದ ಅಂದಾಜು 2.10.000/- ರೂ ಬೆಲೆ ಬಾಳುವ ಬಂಗಾರದ ಸರ ಕಿತ್ತುಕೊಂಡು ಎಸ್ಕೇಪ್‌ ಆಗಿದ್ದಾನೆ. ಈ ಸಂಬಂದ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ಎರಡು (2)

ಬೆಳಗ್ಗೆ 5.50 ರ ಸುಮಾರಿಗೆ ವಾಕಿಂಗ್‌ ಮಾಡಲು ಗೋಪಾಳಗೌಡ ಬಡಾವಣೆ, ಎ ಬ್ಯಾಕ್ ನಲ್ಲಿರುವ ಶ್ರೀ ಕೃಷ್ಣ ಮಠ ಎದುರು ಭಾಗದಲ್ಲಿ ಪಾರ್ಕ ಹತ್ತಿರ ಹೋಗುತ್ತಿದ್ದಾಗ ಪಲ್ಸರ್‌ ಬೈಕ್‌ ಒಂದು ಬಂದಿದೆ. ಅದರಲ್ಲಿದ್ದ ಇಬ್ಬರು ಅಡ್ರೆಸ್‌ ಕೇಳಿದ್ದಾರೆ. ಗೊತ್ತಿಲ್ಲ ಎಂದ ಮಹಿಳೆ ಮುಂದಕ್ಕೆ ಹೋಗಿದ್ದಾರೆ. ಮೊದಲ ಘಟನೆಯ ರೀತಿಯಲ್ಲಿಯೇ ಬೈಕ್‌ನಲ್ಲಿದ್ದ ಒಬ್ಬಾತ ಮುಂದೆ ಹೋದ ಮಹಿಳೆಯ ಹಿಂದಿನಿಂದ ಬಂದು ಕುತ್ತಿಗೆಯಲ್ಲಿದ್ದ ಸರ ಎಳೆದಿದ್ದಾನೆ. ಘಟನೆಯಲ್ಲಿ 25 ಗ್ರಾಂ ನ ಬಂಗಾರದ ಸರ ಕಳ್ಳತನವಾಗಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 

ಪ್ರಕರಣ ಮೂರು (3)

ಶಾರದಾ ನಗರ ನಿವಾಸಿ ಲೋಕಮಾತೆ ಅವರು ಸರ್ಕ್ಯೂಟ್‌ ಹೌಸ್‌ನಲ್ಲಿ ವಾಕಿಂಗ್‌ಗೆ ತೆರಳುತ್ತಿದ್ದರು. ಶರಾವತಿ ನಗರದಲ್ಲಿ ನಡೆದು ಹೋಗುತ್ತಿದ್ದಾಗ ಪಲ್ಸರ್‌ ಬೈಕ್‌ನಲ್ಲಿ ಬಂದ ಇಬ್ಬರು ಸರಗಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬೈಕ್‌ನಲ್ಲಿ ಬಂದ ಇಬ್ಬರ ಪೈಕಿ ಹಿಂಬದಿ ಕುಳಿತಿದ್ದನು ಇಳಿದು ಬಂದು ಲೋಕಮಾತೆ ಅವರ ಕೊರಳಲ್ಲಿ ಇದ್ದ ಚಿನ್ನದ ಸರಕ್ಕೆ ಕೈ ಹಾಕಿದ್ದಾನೆ. ಅರ್ಧ ಚಿನ್ನದ ಸರ ಮತ್ತು ಪೆಂಡೆಂಟ್‌ ಕಿತ್ತುಕೊಂಡು ಹೋಗಿದ್ದಾನೆ. ಸುಮಾರು 8 ಗ್ರಾಂ ಚಿನ್ನ ಕಳುವಾಗಿದೆ. ಇದರ ಮೌಲ್ಯ 40 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಈ ಮೂರು ಪ್ರಕರಣಗಳ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆ, ದೊಡ್ಡಪೇಟೆ ಪೊಲೀಸ್ ಠಾಣೆ ಹಾಗೂ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.