ಮಟ್ಕಾ ದಂಧೆ ನಡೆಸಲು ಲಂಚ ! ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಎಸ್ಐ !
ಶಿವಮೊಗ್ಗ : ಮಟ್ಕಾ ದಂಧೆ ನಡೆಸಲು ಲಂಚ ಪಡೆಯುವಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಎಎಸ್ಐ ರೆಹಮಾನ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ನಗರದ ಸಿಎಎನ್ ಪೊಲೀಸ್ ಠಾಣೆಯ ಎಎಸ್ ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ರೆಹಮಾನ್ ಮಟ್ಕಾ ದಂದೆ ನಡೆಸುವುವರಿಂದ ₹ 1,20,000 ರೂ ಲಂಚವನ್ನ ಬೇಡಿಕೆ ಇಟ್ಟಿದ್ದರು.
ಆರ್ ಎಂ ಎಲ್ ನಗರದ ಮನೆಯ ಬಳಿಯೇ ರೆಹಮಾನ್ ರಫೀಕ್ ಎಂಬುವವರಿಂದ ಒಂದು ಲಕ್ಷ ರೂಪಾಯಿಗಳ ಲಂಚ ಪಡೆಯುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶುಕ್ರವಾರ ಹಣ ಪಡೆಯುವಾಗ ದಾಳಿ ನಡೆದಿದ್ದು. ಲೋಕಾಯುಕ್ತ ಎಸ್ ಪಿ ವಾಸುದೇವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply