ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರ್ಯಾಕ್ಟರ್ ! ಓರ್ವ ಸಾವು !
ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಕಾರ್ಮಿಕ ಸಾವು ಕಂಡಿರುವ ಘಟನೆ ಎಚ್ ಕೆ ಜಂಕ್ಷನ್ ಬಳಿ ನಡೆದಿದೆ.
ಭರತ್, ಪ್ರಕಾಶ ದಿಲೀಪ್ ಮತ್ತು ಮನೋಜನಾಯ್ಕ ಎಂಬ ಈ ನಾಲ್ವರು ರೆಡಿಮೇಡ್ ಕಾಂಪೌಂಡ್ ತಯಾರಿಸುವ ಕೂಲಿ ಕೆಲಸಕ್ಕೆ ಹೋಗುವವರು ಆಗಿದ್ದಾರೆ. ಎಂದಿನಂತೆ ಮಾಲೀಕರು ಸೂಚಿಸದಂತೆ ಟ್ರಾಕ್ಟರಗೆ ರೆಡಿಮೇಡ್ ಕಾಂಪೌಂಡ್ ವಾಲ್ ಪ್ಲೇಟ್ ಮತ್ತು ಪಟ್ಟಿಗಳನ್ನು ಲೋಡ್ ಮಾಡಿ ನಂತರ ಶಿವಮೊಗ್ಗ ತಾಲ್ಲೂಕ್ ಆಯನೂರಿಗೆ ಹೋಗಿ ಅನ್ ಲೋಡ್ ಮಾಡಿ ಬರಲು ಹೋಗಿದ್ದರು.
ತರೀಕೆರೆ ಇಂದ ಲೋಡ್ ಮಾಡಿಕೊಂಡು ತರಿಕೆರೆ-ಶಿವಮೊಗ್ಗ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಲಕ್ಕವಳ್ಳಿ, ಶಂಕರಘಟ್ಟ ಮಾರ್ಗವಾಗಿ ಬರುವಾಗ ತಮಡಿಹಳ್ಳಿ ದಾಟಿ ಹೆಚ್ ಕೆ ಜಂಕ್ಷನ್ ಗ್ರಾಮದ ಬಳಿ ಕೃಷ್ಣಪ್ಪ ಎಂಬುವವರ ಅಡಿಕೆ ತೋಟದಲ್ಲಿ ಅತಿಯಾದ ಲೋಡು ಮತ್ತು ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ರಸ್ತೆಯ ಎಡಗಡೆ ಪಲ್ಟಿಯಾಗಿದೆ.
ಪಲ್ಟಿಯಾದ ಪರಿಣಾಮಕ್ಕೆ ಕಾಂಪೌಂಡ್ ವಾಲ್ ಪ್ಲೇಟ್ ಮತ್ತು ಪಟ್ಟಿಗಳು ಪ್ರಕಾಶ್ ಎನ್ನುವವರ ಮೇಲೆ ಬಿದ್ದಿವೆ, ಇನ್ನೂ ಮೂವರು ಟ್ರ್ಯಾಕ್ಟರ್ ಕೇಳಗೆ ಸಿಲುಕಿ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ. ನಂತರ ಸ್ಥಳೀಯರು ಉಪಚರಿಸಿ ನಾಲ್ವರನ್ನು ಆಂಬುಲೆನ್ಸ್ ಮೂಲಕ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ರವನಿಸಲಾಗಿದೆ.
ನಾಲ್ವರನ್ನು ಪರೀಕ್ಷಿಸಿದ ವೈದ್ಯರು ಪ್ರಕಾಶ್ ಮೃತ ಪಟ್ಟಿದಾರೆ ಎಂದು ತಿಳಿಸಿದ್ದಾರೆ. ಇನ್ನೂ ಉಳಿದ ಮೂವರನ್ನು ಹೆಚ್ಚಿನ ಚಿಕೆತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದ್ದು, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply