ಅಪ್ಪಿ ತಪ್ಪಿಯೂ ಕಮಲದ ಗುರುತಿಗೆ ವೋಟು ಹಾಕಬೇಡಿ – ಮಾಜಿ ಸಚಿವ ಕೆ ಎಸ್ ಈಶ್ವರಪ್ಪ !
ಶಿವಮೊಗ್ಗ : ಅಪ್ಪಿ ತಪ್ಪಿಯೂ ಬಿಜೆಪಿಗೆ, ಕಮಲದ ಗುರುತಿಗೆ ವೋಟು ಹಾಕಬೇಡಿ ಎಂದು ಬಿ.ವೈ. ರಾಘವೇಂದ್ರ ಹೆಸರೇಳದೆಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ನಾಯಕ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಿಂದೂತ್ವವನ್ನು ತುಳಿಯುತ್ತಿದೆ.ಹಿಂದುತ್ವ ಉಳಿವಿಗಾಗಿ ನಾನು ಚುನಾವಣೆ ಸ್ಪರ್ಧಿಸುತ್ತಿದ್ದೇನೆ, ನನ್ನ ಚಿಹ್ನೆ ಕಮಲ ಅಲ್ಲಾ ನನ್ನ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳಬೇಡಿ, ಏಪ್ರಿಲ್ 19 ರಂದು ನನ್ನ ಚಿಹ್ನೆ ಗೊತ್ತಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸಂಸ್ಕೃತಿ ರಾಜ್ಯದಲ್ಲಿ ಬಂದಿದೆ, ಅಪ್ಪ-ಮಕ್ಕಳ ಕೈಯಲ್ಲಿ ಸಿಕ್ಕಿ ಬಿಜೆಪಿ ಒದ್ದಾಡುತ್ತಿದೆ. ಪ್ರತಿ ಬೂತ್ ನಲ್ಲಿ ಈಶ್ವರಪ್ಪ ನವರಿಗೆ ಹೆಚ್ಚಿನ ಬಹುಮತ ಕೊಡಬೇಕು. ಅಪ್ಪಿ ತಪ್ಪಿಯೂ ಬಿಜೆಪಿಗೆ ವೋಟ್ ಹಾಕಬೇಡಿ. ನಾನು ಈಗ ಪಕ್ಷೇತರರ ಸ್ಪರ್ಧಿಸುತ್ತಿದ್ದೇನೆ. ನಾನು ಸಾಯುವವರೆಗೆ ಬಿಜೆಪಿ ಮೋದಿ ಪರವಾಗಿರುತ್ತೇನೆ ಎಂದು ತಿಳಿಸಿದರು.
ನಾನು ಈಗಲೂ ಕೂಡಾ ಬಿಜೆಪಿ. ನಾನು ಸ್ಪರ್ಧೆ ಮಾಡಲು ನಿರ್ಧರಿಸಿ ಆಗಿದೆ. ನಾನು ಸ್ಪರ್ಧೆ ಮಾಡಿದರೆ ಬಿಜೆಪಿಯವರು ಏನು ಮಾಡಬಹುದು ಉಚ್ಚಾಟನೆ ಮಾಡಬಹುದು. ಅಷ್ಟೇ ತಾನೇ ಇನ್ನೇನೂ ಮಾಡಲು ಸಾಧ್ಯ? ನಾನೇನು ಪಕ್ಷ ಬಿಟ್ಟು ಹೋಗಿದ್ದೇನಾ? ಮೋದಿ ವಿಶ್ವ ನಾಯಕ, ಮೋದಿ ಫೋಟೋ ಬಳಸಿಕೊಳ್ಳಬಾರದು ಅಂತ ಎಲ್ಲಿಯೂ ಇಲ್ಲ. ಮೋದಿ ನನ್ನ ಹೃದಯದಲ್ಲಿ ಇದ್ದಾರೆ. ಅವರು ಕೇಸು ಹಾಕಿಕೊಳ್ಳುತ್ತಾರೆಂದೆ ನಾನು ಕೇವಿಯೇಟ್ ಹಾಕಿದ್ದೇನೆ ಎಂದು ಕೆ.ಎಸ್. ಈಶ್ವರಪ್ಪ ಹರಿಹಾಯ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply