ಶಿವಮೊಗ್ಗದಲ್ಲಿ ಖಾಸಗಿ ಬಸ್ ಬ್ರೇಕ್ ಫೇಲ್ ! ಸರಣಿ ಅಪಘಾತ ! 10ಕ್ಕೂ ಹೆಚ್ಚು ಬೈಕ್ ನಜ್ಜುಗುಜ್ಜು !
ಸಾಗರ : ಖಾಸಗಿ ಬಸ್ ಒಂದು ಬ್ರೇಕ್ ಫೇಲಾಗಿ 9 ರಿಂದ 10 ಬೈಕ್ ಗಳಿಗೆ ಡಿಕ್ಕಿ ಹೊಡೆದಿ ಸರಣಿ ಅಪಘಾತ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಳೆ ಬಸ್ ನಿಲ್ದಾಣದ ಬಳಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಹಳೆಬಸ್ ನಿಲ್ದಾಣದ ಹತ್ತಿರ ಗಜಾನನ ಸಾರಿಗೆ ಸಂಸ್ಥೆಗೆ ಸೆರಿದ KA 15 2944 ಬಸ್ ಪ್ರಯಾಣಿಕರನ್ನು ಇಳಿಸಿದ ನಂತರದಲ್ಲಿ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ಸಂಭವಿಸಿದೆ ಚಾಲಕನ ನಿಯಂತ್ರಣ ತಪ್ಪಿದೆ.ಈ ಅಪಘಾತದಲ್ಲಿ 9ಕ್ಕೂ ಹೆಚ್ಚು ಬೈಕ್ ಗಳು ನಜ್ಜುಗುಜ್ಜಾಗಿರೋ ಘಟನೆ ನಡೆದಿದೆ.
ಬಸ್ ಬ್ರೇಕ್ ಫೇಲ್ ಆದ ಪರಿಣಾಮ ಬಸ್ ನಿಲ್ದಾಣದ ಬಳಿಯಲ್ಲಿ ನಿಲ್ಲಿಸಿದ್ದಂತ ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ 10ಕ್ಕೂ ಹೆಚ್ಚು ಬೈಕ್ ಗಳು ನಜ್ಜುಗುಜ್ಜಾಗಿದ್ದಾವೆ.
ನೆನ್ನೆ ಸಂಜೆ 5.50ರ ಸುಮಾರಿಗೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಈ ಸರಣಿ ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಈ ಸಂಬಂಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವರದಿ : ಅಮಿತ್ ಆನಂದಪುರ
Leave a Reply