ಒಂದೇ ಕಾರ್ಯಕ್ರಮದಲ್ಲಿ ಪರಸ್ಪರ ಮುಖಾ ಮುಖಿಯಾದ ಬಿ ವೈ ರಾಘವೇಂದ್ರ ಮತ್ತು ಕೆ ಎಸ್ ಈಶ್ವರಪ್ಪ !
ಶಿವಮೊಗ್ಗ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಶರಾವತಿ ನಗರದಲ್ಲಿರುವ ಆದಿಚುಂಚನಗಿರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವದ ಹಿನ್ನಲೆಯಲ್ಲಿ ಸಂಸ್ಥಾಪನಾ ದಿನಾಚರಣೆ ನಡೆದಿದೆ.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣೆಯ ಸ್ಪರ್ಧಿಗಳಾದ ಬಿ.ವೈ.ರಾಘವೇಂದ್ರ ಮತ್ತು ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಒಂದೇ ಕಾರ್ಯಕ್ರಮದಲ್ಲಿ ಇಬ್ಬರು ಭಾಗಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾದರೂ ಬಿ.ವೈ.ರಾಘವೇಂದ್ರ ಮತ್ತು ಕೆ.ಎಸ್.ಈಶ್ವರಪ್ಪ ಪರಸ್ಪರ ಮುಖ ನೋಡಿಲ್ಲ,ಮಾತುಕತೆ ನಡೆಸಿಲ್ಲ. ಸಂಸದ ರಾಘವೇಂದ್ರ ಒಂದು ಬದಿಯಲ್ಲಿ, ಮತ್ತೊಂದು ಬದಿಯಲ್ಲಿ ಈಶ್ವರಪ್ಪ ಕುಳಿತಿದ್ದರು.
ಯುಗಾದಿ ಉತ್ಸವ ಕಾರ್ಯಕ್ರಮದ ಬಳಿಕ ಆರೆಸ್ಸೆಸ್ ಮುಖಂಡರು, ಕಾರ್ಯಕರ್ತರು ಶುಭಾಷಯ ವಿನಿಮಯ ಮಡಿಕೊಂಡು, ಬೇವು ಬೆಲ್ಲ ಹಂಚಿದರು. ಈ ಸಂದರ್ಭ ರಾಘವೇಂದ್ರ ಮತ್ತು ಈಶ್ವರಪ್ಪ ದೂರ ದೂರವೆ ಉಳಿದು ಕಾರ್ಯಕ್ರಮದಿಂದ ಮರಳಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply